ಕೊರೊನಾ ವೈರಸ್ ಮಾಡದ ದುರಂತವಿಲ್ಲ. ಕೊರೊನಾ ವೈರಸ್ ನಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಅನೇಕರು ಆಪ್ತರನ್ನು ಕಳೆದುಕೊಂಡಿದ್ದಾರೆ. ಮತ್ತೆ ಕೆಲವರು ಕೊರೊನಾ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.
ಗುಡ್ ನ್ಯೂಸ್: ಗರೀಬ್ ಕಲ್ಯಾಣ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 50 ಲಕ್ಷ ರೂ. ವಿಮೆ ಸೌಲಭ್ಯ
ಕೆಲ ಗರ್ಭಿಣಿಯರು, ಕೊರೊನಾ ಕಾಡಿದ ಸಂದರ್ಭದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಆದ್ರೆ ಯುಕೆಯಲ್ಲಿ ನಡೆದ ಘಟನೆಯೊಂದು ಅಚ್ಚರಿ ಮೂಡಿಸಿದೆ. ಕೋಮಾಕ್ಕೆ ಹೋದ ಮಹಿಳೆಗೆ ಹೆರಿಗೆ ಮಾಡಿಸಲಾಗಿದೆ.
BIG BREAKING: ಒಂದೇ ದಿನ ಮತ್ತೆ 18,833 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; 2,46,687 ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲು
ವರದಿಯ ಪ್ರಕಾರ, ಯುಕೆ ಮೂಲದ ಕೆಲ್ಸಿ ರೂಟ್ಸ್ 28 ವಾರಗಳ ಗರ್ಭಿಣಿಯಾಗಿದ್ದಳು. ಉಸಿರಾಟದ ತೊಂದರೆಯಿಂದ ಆಕೆಯನ್ನು ಆಸ್ಪತ್ರೆಗೆ ಕರೆತರಲಾಯಿತು. ಪರೀಕ್ಷೆ ವೇಳೆ ಆಕೆಗೆ ಕೊರೊನಾ ಎಂಬುದು ದೃಢಪಟ್ಟಿದೆ. ಗರ್ಭಿಣಿ ಕೆಲ್ಸಿಗೆ ವೈದ್ಯರು, ಚಿಕಿತ್ಸೆ ಶುರು ಮಾಡಿದ್ದಾರೆ. ಮಹಿಳೆಗೆ ಹೆಚ್ಚಿನ ವಿಶ್ರಾಂತಿ ಅಗತ್ಯವಿದ್ದ ಕಾರಣ ವೈದ್ಯರು, ಅವಳನ್ನು ಕೋಮಾಕ್ಕೆ ಕಳುಹಿಸಿದ್ದಾರೆ.
ನಂತ್ರ ಕೆಲ್ಸಿಗೆ ತುರ್ತು ಹೆರಿಗೆ ಮಾಡಿಸಲಾಗಿದೆ. ಕೆಲ್ಸಿ, ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ದಿನಾಂಕಕ್ಕಿಂತ 12 ವಾರಗಳ ಮೊದಲೇ ಮಗುವಿಗೆ ಕೆಲ್ಸಿ ಜನ್ಮ ನೀಡಿದ್ದಾಳೆ. ಮಗು ಜನಿಸಿ 7 ದಿನಗಳ ನಂತ್ರ ಕೆಲ್ಸಿ, ಕೋಮಾದಿಂದ ಹೊರಗೆ ಬಂದಿದ್ದಾಳೆ. ಮಗುವನ್ನು ನೋಡಿದ ಕೆಲ್ಸಿ, ಅಚ್ಚರಿ ವ್ಯಕ್ತಪಡಿಸಿದ್ದಾಳೆ.
ʼಕೊರೊನಾʼ ಲಸಿಕೆ ಇನ್ನೂ ಪಡೆದಿಲ್ವಾ…? ಹಾಗಾದ್ರೆ ಈ ಸುದ್ದಿ ಓದಿ
ಮಗುವನ್ನು ನೋಡಿ, ಆಘಾತ,ಖುಷಿ ಎರಡೂ ಆಯ್ತು. ವೈದ್ಯರು ಮಗು ಹಾಗೂ ನನ್ನ ಆರೋಗ್ಯಕ್ಕಾಗಿ ಈ ರೀತಿ ಮಾಡಿದ್ದರು. ಮಗು ಹಾಗೂ ನಾನು ಇಬ್ಬರು ಜೀವಂತವಿರುವುದು ವೈದ್ಯರ ಕಾರಣದಿಂದ ಎಂದು ಕೆಲ್ಸಿ ಖುಷಿ ವ್ಯಕ್ತಪಡಿಸಿದ್ದಾಳೆ. ಮೂರು ಮಕ್ಕಳ ತಾಯಿಯಾದ ಕೆಲ್ಸಿ, ಇದೊಂದು ಪವಾಡ ಎಂದಿದ್ದಾಳೆ.