ಪ್ಲೋರಿಡಾ ಪ್ರಾಥಮಿಕ ಶಾಲೆಯ ಶಿಕ್ಷಕಿಯೊಬ್ಬಳು ತನ್ನ ಅಪ್ರಾಪ್ತ ಮಾಜಿ ವಿದ್ಯಾರ್ಥಿಯೊಂದಿಗೆ ಅನೇಕ ಬಾರಿ ಸೆಕ್ಸ್ ನಡೆಸಿದ್ದಾಳೆ. ಈ ಸಂಬಂಧ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ.
31 ವರ್ಷದ ಬ್ರಿಟಿನಿ ಲೋಪೆಜ್ ಮುರ್ರೆ ಆಗಸ್ಟ್ ತಿಂಗಳಲ್ಲಿ ಅಪ್ರಾಪ್ತ ಬಾಲಕನಿಗೆ ಮೆಸೇಜ್ ಮಾಡಿದ್ದಾಳೆ. ತನಗೆ ಆತನ ಮೇಲೆ ಇರುವ ಭಾವನೆಗಳನ್ನು ವ್ಯಕ್ತಪಡಿಸಿದ್ದಳು. ಸದ್ಯ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಅಪ್ರಾಪ್ತ ಸೆಕ್ಸ್ ಜೀವನದ ಬಗ್ಗೆ ಶಿಕ್ಷಕಿಯೊಂದಿಗೆ ಮೆಸೇಜ್ನಲ್ಲಿ ವಿನಿಮಯ ಮಾಡಿದ್ದಾನೆ.
ತಂದೆ ಗೆಲುವಿಗಾಗಿ ಪ್ರಾರ್ಥಿಸಿದ ಜೀವಾ ಧೋನಿ: ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ ಮುದ್ದಾದ ಫೋಟೋ
ಬಾಸ್ಕೆಟ್ಬಾಲ್ ಪ್ರ್ಯಾಕ್ಟಿಸ್ ಮುಗಿದ ಬಳಿಕ ಬಾಲಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಶಿಕ್ಷಕಿ ಬಳಿಕ ಕಾರಿನಲ್ಲಿಯೇ ಲೈಂಗಿಯ ಕ್ರಿಯೆ ನಡೆಸುತ್ತಿದ್ದರು ಎನ್ನಲಾಗಿದೆ. ಆದರೆ ಅಪ್ರಾಪ್ತ ಬಾಲಕನ ಸಹೋದರಿ ಇವರಿಬ್ಬರ ಚಾಟ್ಗಳು ಹಾಗೂ ಫೋಟೋಗಳನ್ನು ನೋಡಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಪುತ್ರನ ಮೊಬೈಲ್ನಲ್ಲಿದ್ದ ಶಿಕ್ಷಕಿಯ ಬೆತ್ತಲೆ ಫೋಟೋಗಳನ್ನು ತಂದೆ ಕೂಡ ನೋಡಿದ್ದು ಶಾಕ್ ಆಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಶಿಕ್ಷಕಿಯನ್ನು ಬಂಧಿಸಲಾಗಿದೆ. ಹಾಗೂ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.