alex Certify ಈ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರ ಕೊಡಬೇಡಿ ಎಂದಿದೆ ಹೈಕೋರ್ಟ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಬೀದಿ ನಾಯಿಗಳಿಗೆ ಆಹಾರ ಕೊಡಬೇಡಿ ಎಂದಿದೆ ಹೈಕೋರ್ಟ್​..!

ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದದ ಸಂಬಂಧ ವಿಚಾರಣೆ ನಡೆಸಿದ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ ಒಂದೇ ಕುಟುಂಬದ ಮೂವರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ವಸತಿ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಸೂಚನೆ ನೀಡಿದೆ. ಇದರಿಂದ ಬೀದಿ ನಾಯಿಗಳು ಆ ಸ್ಥಳದಲ್ಲಿ ಹೆಚ್ಚೆಚ್ಚು ಓಡಾಡುತ್ತವೆ ಎಂದು ಹೇಳಿದೆ.

ಬಲಬೀರ್​ ಕೌರ್​ ಎಂಬವರ ದೂರನ್ನು ಆಧರಿಸಿ ಅರ್ಜಿದಾರ ಮನದೀಪ್​ ಸಿಂಗ್​, ಅವರ ಪತ್ನಿ ಹಾಗೂ ಪುತ್ರಿ ಲವಪ್ರೀತ್​​ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ  ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಆರೋಪಗಳ ಅಡಿಯಲ್ಲಿ ಕಪೂರ್​ಥಲಾ ಜಿಲ್ಲೆಯ ಫಗವಾಡಾದ ಸತನಾಮಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಟೋದಲ್ಲಿದ್ದ ಬರೋಬ್ಬರಿ 1 ಲಕ್ಷ ರೂಪಾಯಿ ಎಗರಿಸಿದ ಕೋತಿರಾಯ..!

ಬಲಬೀರ್​ ಕೌರ್​​ ದೂರಿನ ಪ್ರಕಾರ ಆರೋಪಿ ಮನದೀಪ್​ ಸಿಂಗ್​​ 8-9 ಬೀದಿ ನಾಯಿಗಳನ್ನು ಸಾಕಿದ್ದಾರೆ. ಇವು ರಸ್ತೆಯಲ್ಲಿ ಗಲೀಜು ಮಾಡುತ್ತವೆ . ಈ ಬಗ್ಗೆ ಗ್ರಾಮದ ಅನೇಕರು ಪರಿವಾರದ ಬಳಿ ಹೇಳಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದ್ದರು.

ಇದು ಮಾತ್ರವಲ್ಲದೇ ಬೀದಿ ನಾಯಿಗಳು ತಾವು ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ನಾಶ ಮಾಡಿವೆ. ಹಾಗೂ 2019ರ ನವೆಂಬರ್​ 24ರಂದು ಬಲಬೀರ್​ ಹಾಗೂ ಲವಲೀನ್​ ನಮ್ಮ ಮನೆಯ ಮುಂದೆ ಬಂದು ಹಲ್ಲೆ ನಡೆಸಿದ್ದಾರೆ ಹಾಗೂ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.

SHOCKING VIDEO: ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ಜೀಪ್ ನುಗ್ಗಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆ, ವಿಡಿಯೋ ವೈರಲ್

ಆರೋಪಿ ಕುಟುಂಬಕ್ಕೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್, ಬೀದಿ ನಾಯಿಗಳಿಗೆ ವಸತಿ ಪ್ರದೇಶಗಳಲ್ಲಿ ಆಹಾರ ನೀಡದಂತೆ ಆರೋಪಿ ಕುಟುಂಬಕ್ಕೆ ಖಡಕ್​ ಸೂಚನೆ ನೀಡಿದೆ. ಆಹಾರ ಸಿಗುವ ಜಾಗದಲ್ಲಿ ಶ್ವಾನಗಳು ಹೆಚ್ಚು ಓಡಾಡುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗೆ ಆಹಾರ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...