alex Certify ವಿಮಾನ ನಿಲ್ದಾಣಕ್ಕೆ ಬಂದ ಅನಿರೀಕ್ಷಿತ ಅತಿಥಿಯನ್ನು ಕಂಡು ಪ್ರಯಾಣಿಕರು ಕಂಗಾಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ನಿಲ್ದಾಣಕ್ಕೆ ಬಂದ ಅನಿರೀಕ್ಷಿತ ಅತಿಥಿಯನ್ನು ಕಂಡು ಪ್ರಯಾಣಿಕರು ಕಂಗಾಲು…!

ಮಂಗನಿಂದ ಮಾನವ ಅನ್ನುವ ವಾದ ಯಾರಿಗೆ ತಾನೇ ಗೊತ್ತಿಲ್ಲ. ಅವುಗಳ ಆಟ, ಚೇಷ್ಟೆ ಒಮ್ಮೊಮ್ಮೆ ನೋಡಲು ಬಾರಿ ಚಂದ. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಳಕ್ಕೆ ಹೊಕ್ಕಿದಲ್ಲದೇ, ಅಲ್ಲೇ ಇದ್ದ ಹೋಟೆಲ್ ಒಂದಕ್ಕೆ ನಿರಾಯಾಸವಾಗಿ ನುಗ್ಗಿ ಟೇಬಲ್ ಬಳಿ ಇಟ್ಟಿದ್ದ ಹಣ್ಣಿನ ರಸ ಕುಡಿದು, ತಿಂಡಿಯನ್ನು ಸಹ ತಿಂದ ಮಂಗನ ವಿಡಿಯೋ ಈಗ ಸಕತ್ ವೈರಲ್ ಆಗಿದೆ.

BIG NEWS: ರೇವ್ ಪಾರ್ಟಿ ಮೇಲೆ ರೇಡ್, ಸೂಪರ್ ಸ್ಟಾರ್ ಪುತ್ರ ಅರೆಸ್ಟ್ –ಡ್ರಗ್ಸ್ ವಶಕ್ಕೆ

ಇದು ಬಂದಿದ್ದು ಅಂತಿಂತ ಜಾಗಕ್ಕೆ ಅಲ್ಲ ವಿಐಪಿ ಲಾಂಜ್ ನಲ್ಲಿ, ಅಲ್ಲಿ ತನ್ನಷ್ಟಕ್ಕೆ ತಾನೆ ತಿಂದು, ಆಮೇಲೆ ತಂಪು ಪಾನೀಯ ಕುಡಿದು ಹೋದ ಮಂಗನಿಂದಾಗಿ ಅದನ್ನು ನೋಡಿದವರಿಗೆ ಅಲ್ಲೊಂದು ಬಿಟ್ಟಿ ಮನರಂಜನೆ ಸಿಕ್ಕಿದಂತಾಯ್ತು. ಅಲ್ಲಿ ನೆರೆದಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ಒಂದೆರೆಡು ನಿಮಿಷ ನಿಲ್ಲುವಂತೆ ಮಾಡಿ, ಸದ್ದಿಲ್ಲದೇ ಗೋಡೆ ಹಾರಿ ಹೋಯ್ತು.

ಮತ್ತೆ ಮತ್ತೆ ಬಳಸುವ ʼಪ್ಲಾಸ್ಟಿಕ್ʼ ಬಾಟಲ್ ಎಷ್ಟು ಡೇಂಜರಸ್ ಗೊತ್ತಾ…..?

ರಾಷ್ಟ್ರ ರಾಜಧಾನಿಯಲ್ಲಿ ಇಷ್ಟೇ ಅಲ್ಲ , ಮೆಟ್ರೊಗೂ ಕಾಲಿಟ್ಟಿದೆ ಮಂಗ. ಮತ್ತೊಂದು ಘಟನೆಯಲ್ಲಿ, ದೆಹಲಿಯ ಮೆಟ್ರೋ ರೈಲಿನಲ್ಲಿ ನುಗ್ಗಿತ್ತೊಂದು ಮಂಗ. ನೀಲಿ ಮಾರ್ಗದ ರೈಲು, ಯಮುನಾ ಬ್ಯಾಂಕ್ ನಿಲ್ದಾಣದಿಂದ ಐಪಿ ನಿಲ್ದಾಣಕ್ಕೆ ಸಾಗುವಾಗ, ಮಂಗ ರೈಲಿನೊಳಗೆ ನುಗ್ಗಿ, ಕಿಟಕಿಯ ಪಕ್ಕ ಕೂತಿದ್ದು, ಯಾರಿಗೂ ತೊಂದರೆ ಮಾಡದೆ ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗಿತ್ತಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...