ಚೆನ್ನೈ: ಕಳೆದ ಕೆಲದಿನಗಳಿಂದ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಜನ, ಜಾನುವಾರುಗಳು ನರಭಕ್ಷಕ ಹುಲಿಗೆ ಬಲಿಯಾಗುತ್ತಿದ್ದು, ಇದೀಗ ಅರಣ್ಯ ಇಲಾಖೆ ನರಭಕ್ಷಕ ಹುಲಿಯನ್ನು ಕೊಲ್ಲಲು ಆದೇಶ ಹೊರಡಿಸಿದೆ.
ನೀಲಗಿರಿ ಜಿಲ್ಲೆಯಲ್ಲಿ ನರಭಕ್ಷಕ ಹುಲಿ ನಾಲ್ವರನ್ನು ಕೊಂದಿದ್ದು, 20 ಜಾನುವಾರುಗಳನ್ನು ತಿಂದು ತೇಗಿದೆ. ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚಾರಣೆ ವಿಫಲವಾಗಿದೆ.
ಭಾರತೀಯ ಸೇನೆಯಿಂದ ವಿಶ್ವದ ಅತಿದೊಡ್ಡ ರಾಷ್ಟ್ರ ಧ್ವಜ ಅನಾವರಣ
ಜಿಲ್ಲೆಯಲ್ಲಿ ಅಲ್ಲಲ್ಲಿ ಬೋನುಗಳನ್ನು ಇಟ್ಟು ಹುಲಿ ಸೆರೆಗಾಗಿ ಯತ್ನಿಸಿದರೂ ಸಾಧ್ಯವಾಗಿಲ್ಲ. ಹುಲಿ ದಾಳಿಯಿಂದ ಜನರು ಭಯದಿಂದ ಬದುಕುವಂತಾಗಿದೆ. ಹುಲಿಯನ್ನು ಕೊಲ್ಲುವಂತೆ ಸರ್ಕಾರಕ್ಕೆ ಜನರು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ತಮಿಳುನಾಡು ಪ್ರಧಾನ ಮುಖ್ಯ ಅರಣ್ಯ, ವನ್ಯಜೀವಿ ಸಂರಕ್ಷಣೆಯ ವಾರ್ಡನ್ ಡಾ.ಶೇಖರ್ ಕುಮಾರ್ ನೀರಜ್, ಹುಲಿಯನ್ನು ಕೊಲ್ಲುವಂತೆ ಆದೇಶ ಹೊರಡಿಸಿದ್ದಾರೆ.
ಹುಲಿ ಬೇಟೆಗೆ ಮುಂದಾಗಿರುವ ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೇರಳ ಅಧಿಕಾರಿಗಳು ಕೈಜೋಡಿಸಿದ್ದಾರೆ.