ಹಿರಿಯ ನಾಗರಿಕರು ಅಥವಾ ನಿವೃತ್ತಿಯ ಅಂಚಿನಲ್ಲಿ ಇರುವವರು ಅಥವಾ ನಿವೃತ್ತಿ ಜೀವನದ ಬಗ್ಗೆ ಮುಂಚಿತವಾಗೇ ಯೋಜನೆ ಹೆಣೆಯುತ್ತಿರುವವರು ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕಾಗುತ್ತದೆ.
ಅದರಲ್ಲೂ ಕೈನಲ್ಲಿರುವ ಹಣವು ಜೀವನದ ಅಂತ್ಯದವರೆಗೆ ನೆರವಾಗುವಂತೆ ವಿಸ್ತಾರಗೊಳ್ಳುವ ಆರ್ಥಿಕ ನೆರವಿನ ಯೋಜನೆಗಳನ್ನು ಹಣಕಾಸು ತಜ್ಞರಿಂದ ಕೇಳಿ ತಿಳಿದುಕೊಳ್ಳಬೇಕು. ಇಲ್ಲವಾದರೆ ಸ್ನೇಹಿತರು, ಕುಟುಂಬಸ್ಥರಿಂದ ಕೂಡ ಹೂಡಿಕೆ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಇರುತ್ತದೆ. ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೂ ಸಹಾಯಕವಾಗಲಿದೆ.
ವರ್ಷಾಂತ್ಯದ ತೆರಿಗೆ ಪಾವತಿ ತಪ್ಪಿಸುವ ಸಲುವಾಗಿ ಮಾತ್ರವೇ ಜೀವ ವಿಮೆ ಪಾಲಿಸಿ ಖರೀದಿಯನ್ನು ಹಿರಿಯ ನಾಗರಿಕರು ಮಾಡಬಾರದು. ನಿಮ್ಮ ಕುಟುಂಬದಲ್ಲಿ ನೀವೇ ಪ್ರಮುಖ ವೇತನ ಗಳಿಕೆದಾರರು ಆಗಿದ್ದಲ್ಲಿ ಮಾತ್ರವೇ ಜೀವ ವಿಮೆಯು ಉತ್ತಮ ಹೂಡಿಕೆ ಯೋಜನೆ ಆಗಿರುತ್ತದೆ.
ಖಾಲಿ ವಿಮಾನದಲ್ಲಿ ಗಗನಸಖಿಯ ಭರ್ಜರಿ ಡಾನ್ಸ್
ವೃದ್ಧಾಪ್ಯದಲ್ಲಿ ಬಹಳ ಮುಖ್ಯವಾದದ್ದು ಬಂಡವಾಳ ಭದ್ರತೆ ಅಂದರೆ ಕೈಗೆಟಕುವ ರೀತಿಯಲ್ಲಿ ಸಾಕಷ್ಟು ಹಣವು ಇರಬೇಕು. ಮುಂದೆ ಯಾವುದೋ ಕಾಲಕ್ಕೆ ಹಣವು ಬಂದರೆ ಪ್ರಯೋಜನವಿಲ್ಲ.
ತಿಂಗಳ ಖರ್ಚಿಗೆ ತಕ್ಕಷ್ಟು ಆದಾಯ ಕೈನಲ್ಲಿದ್ದರೆ ಆತಂಕ ಇರಲ್ಲ. ಒಂದು ವೇಳೆ ಠೇವಣಿ ಯೋಜನೆ ಪಡೆಯಬೇಕಿದ್ದಲ್ಲಿ ಅತಿ ಕಡಿಮೆ ಅವಧಿಯ ಆಯ್ಕೆ ಮಾಡಿರಿ.
ಮೂರು ವರ್ಷಗಳ ಲಾಕ್-ಇನ್ ಅವಧಿ ಇರುವ ಹೂಡಿಕೆ/ಠೇವಣಿ ಯೋಜನೆಗಳು ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್, ಪಿಪಿಎಫ್‌ಗಳಲ್ಲಿ ಹೂಡಿಕೆಗಿಂತ ಮೇಲೂ. ಅಂದರೆ ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಯೋಜನೆ (ಇಎಲ್‌ಎಸ್‌ಎಸ್) ಉತ್ತಮವಾಗಿರುತ್ತದೆ.
ಮೊಬೈಲ್ ಕಳೆದುಕೊಂಡವರಿಗೆ ಗುಡ್ ನ್ಯೂಸ್: ಪತ್ತೆಗೆ ನೆರವಾಗುತ್ತೆ ಈ ಆಪ್
ಅಂಚೆ ಕಚೇರಿಯಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎನ್‌ಸಿಎಸ್‌ಎಸ್) ಕೂಡ ಶೇ.7.40 ಬಡ್ಡಿ ನೀಡುವ ಮೂಲಕ ಹೂಡಿಕೆಗೆ ಉತ್ತಮ ಯೋಜನೆ ಎನಿಸಿದೆ. ಜಂಟಿ ಖಾತೆ ತೆರೆಯಲು ಕೂಡ ಇದರಲ್ಲಿ ಅವಕಾಶವಿದೆ.
15 ಲಕ್ಷ ರೂ.ವರೆಗೆ ಈ ಖಾತೆಯಲ್ಲಿ ಹಣ ಹೂಡಿಕೆ ಮಾಡಬಹುದು. ಬಡ್ಡಿಯ ಮೊತ್ತದ ಮೇಲೆ ತೆರಿಗೆ ಹೇರಿಕೆ ಆಗಲಿದೆ ಎನ್ನುವುದು ನೆನಪಿರಲಿ.
ಮಧ್ಯೆ ವಯಸ್ಸಿನಲ್ಲಿ ಯುವಕರಂತೆ ಕಾಣ್ಬೇಕಾ…..? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ
2021ರ ಕೇಂದ್ರ ಬಜೆಟ್ ಅನ್ವಯ 75 ವರ್ಷ ಮೇಲ್ಪಟ್ಟ ಪ್ರಜೆಗಳು ಹಣಕಾಸು ವರ್ಷದ ಕೊನೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಮಾಡುವ ಅಗತ್ಯವಿಲ್ಲ. ಅದರಲ್ಲೂ ಪಿಂಚಣಿ ಮತ್ತು ಬಡ್ಡಿ ಮಾತ್ರವನ್ನೇ ಆಶ್ರಯಿಸುವವರಿಗೆ ಈ ವಿನಾಯಿತಿ ಅನ್ವಯವಾಗಲಿದೆ.