ಮಕ್ಕಳೆಂದರೆ ದೇವರ ಸಮಾನ ಅಂತಾ ಹೇಳುತ್ತಾರೆ. ಅವರು ಯಾವತ್ತೂ ಸುಳ್ಳು ಹೇಳುವುದಿಲ್ಲ. ತಮಗೆ ಅನಿಸಿದ್ದನ್ನು ಇದ್ದ ಹಾಗೆಯೇ ಹೇಳಿಬಿಡುವುದು ಮಕ್ಕಳ ಸ್ವಭಾವ. ಹಾಗೆಯೇ ಇಲ್ಲೊಬ್ಬಳು 5 ವರ್ಷದ ಬಾಲಕಿ ತನ್ನ ತಂದೆಯ ಬಗ್ಗೆ ಕವಿತೆ ರಚಿಸಿದ್ದಾಳೆ. ಇದೀಗ ಈ ಕವಿತೆ ಭಾರಿ ವೈರಲ್ ಆಗಿದೆ.
ತನ್ನ ತಂದೆಯ ದೈಹಿಕ ಲಕ್ಷಣಗಳ ಬಗ್ಗೆ ಕವಿತೆ ಬರೆದಿರುವ ಈ ಪೋರಿ, ತಂದೆ ಸೋಮಾರಿ, ಹಾಗೂ ಕೊಂಚ ವಾಸನೆ ಮತ್ತು ಅವರಿಗೆ ಕ್ಷೌರ ಬೇಕು ಎಂದು ತನ್ನ ಕವಿತೆಯಲ್ಲಿ ವಿವರಿಸಿದ್ದಾಳೆ.
“ನನ್ನ ತಂದೆಯನ್ನು ಫ್ರೇಜರ್ ಎಂದು ಕರೆಯಲಾಗುತ್ತದೆ. ಅವನು ಎಂದಿಗೂ ರೇಜರ್ ಬಳಸುವುದಿಲ್ಲ. ಅವನಿಗೆ ಗಡ್ಡವಿದೆ ಮತ್ತು ಅವನು ನಿಜವಾಗಿಯೂ ವಿಚಿತ್ರವಾಗಿದ್ದಾನೆ. ನನ್ನ ತಂದೆ ನಿಜವಾಗಿಯೂ ಚಿಕ್ಕವರು ಹಾಗೂ ಅವರ ತಲೆ ಚೆಂಡಿನಂತಿದೆ.
BREAKING NEWS: ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ ಮಾಜಿ ಸಿಎಂ TMC ಸೇರ್ಪಡೆ
ಅವನ ಕಿವಿಗಳು ದೊಡ್ಡದಾಗಿದೆ ಮತ್ತು ಅವನಿಗೆ ವಿಗ್ ಬೇಕು ಎಂದು ನಾನು ಭಾವಿಸುತ್ತೇನೆ. ನನ್ನ ತಂದೆ ಕ್ರೇಜಿಯಾಗಿದ್ದಾರೆ ಹಾಗೂ ಬೆಳಗ್ಗೆ ಹೊತ್ತು ಅವರು ಸೋಮಾರಿಯಾಗಿರುತ್ತಾರೆ. ಅವನಿಗೆ ದೊಡ್ಡ ಹೊಟ್ಟೆ ಇದೆ ಮತ್ತು ಬಾಯಿ ತುಂಬಾ ವಾಸನೆ ಇದೆ. ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆ, ಅವನು ತುಂಬಾ ಸುಂದರ” ಎಂದು ಈ ಪುಟ್ಟ ಪೋರಿ ತನ್ನ ತಂದೆ ಬಗ್ಗೆ ಈ ರೀತಿ ಕವಿತೆ ಬರೆದಿದ್ದಾಳೆ.
ಈ ಕವಿತೆಯನ್ನು ಹುಡುಗಿಯ ತಾಯಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, “ಹಂಚಿಕೊಳ್ಳದಿರುವುದು ತುಂಬಾ ಒಳ್ಳೆಯದು” ಎಂದು ಶೀರ್ಷಿಕೆ ನೀಡಿದ್ದಾರೆ. ಐದು ವರ್ಷದ ಮಗು ತನ್ನ ಕಾಗುಣಿತವನ್ನು ಹೇಗೆ ಸರಿಯಾಗಿ ಮಾಡಿದೆ ಅಂತಾ ಹಲವಾರು ಮಂದಿ ಆಶ್ಚರ್ಯ ಪಟ್ಟಿದ್ದಾರೆ. ಜೊತೆಗೆ ಈ ಕವಿತೆಯನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.