alex Certify ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಅ.1ರಿಂದ ಅಂಚೆ ಕಚೇರಿ ಎಟಿಎಂ ಕಾರ್ಡ್ ಬಳಕೆದಾರರ ಜೇಬಿಗೆ ಬೀಳಲಿದೆ ಕತ್ತರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಅ.1ರಿಂದ ಅಂಚೆ ಕಚೇರಿ ಎಟಿಎಂ ಕಾರ್ಡ್ ಬಳಕೆದಾರರ ಜೇಬಿಗೆ ಬೀಳಲಿದೆ ಕತ್ತರಿ

ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೊಂದು ಮಹತ್ವದ ಸುದ್ದಿಯಿದೆ.‌ ಅಕ್ಟೋಬರ್ 1 ರಿಂದ ಎಟಿಎಂ ಕಾರ್ಡ್ ಮೇಲಿನ ಶುಲ್ಕದಲ್ಲಿ ಬದಲಾವಣೆಯಾಗಲಿದೆ. ಅಂಚೆ ಇಲಾಖೆ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.

ಅಕ್ಟೋಬರ್ 1 ರಿಂದ ಎಟಿಎಂ/ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣಾ ಶುಲ್ಕ 125 ರೂಪಾಯಿಯಾಗಲಿದೆ. ಈ ಶುಲ್ಕಗಳು ಅಕ್ಟೋಬರ್ 1,2021 ರಿಂದ ಸೆಪ್ಟೆಂಬರ್ 30,2022 ರವರೆಗೆ ಅನ್ವಯವಾಗುತ್ತವೆ.

ಅಂಚೆ ಕಚೇರಿ ಗ್ರಾಹಕರು ತಮ್ಮ ಎಟಿಎಂ ಕಾರ್ಡ್ ಕಳೆದುಕೊಂಡಿದ್ದರೆ, ಅಕ್ಟೋಬರ್ 1 ರಿಂದ ಮತ್ತೊಂದು ಡೆಬಿಟ್ ಕಾರ್ಡ್ ಪಡೆಯಲು 300 ರೂಪಾಯಿ ಜೊತೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಎಟಿಎಂ ಪಿನ್ ಕಳೆದುಹೋದರೆ, ಅಕ್ಟೋಬರ್ 1 ರಿಂದ ನಕಲಿ ಪಿನ್‌ಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಕ್ಕಾಗಿ, ಗ್ರಾಹಕರು ಶಾಖೆಗೆ ಹೋಗಿ ಮತ್ತೆ ಪಿನ್ ಪಡೆಯಬೇಕು. ಇದಕ್ಕೆ 50 ರೂಪಾಯಿ ಜೊತೆ ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ.

ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲವ ಕಾರಣ,‌ ಟಿಎಂ ಅಥವಾ ಪಿಒಎಸ್ ವಹಿವಾಟು ರದ್ದಾದ್ರೆ ಗ್ರಾಹಕರು ಅದಕ್ಕಾಗಿ 20 ರೂಪಾಯಿ ಜೊತೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

ಅಂಚೆ ಕಚೇರಿ ಎಟಿಎಮ್‌ಗಳಲ್ಲಿ, ಹಣಕಾಸೇತರ ವಹಿವಾಟುಗಳಿಗಾಗಿ, ಗ್ರಾಹಕರು ಐದು ಉಚಿತ ವಹಿವಾಟುಗಳ ನಂತರ ಪ್ರತಿ ವಹಿವಾಟಿಗೆ 5 ರೂಪಾಯಿ ಮತ್ತು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇತರ ಬ್ಯಾಂಕುಗಳ ಎಟಿಎಂ ಬಳಸಿದ್ರೆ ಮೂರು ಉಚಿತ ವಹಿವಾಟಿನ ನಂತ್ರ ಹಾಗೂ ಮೆಟ್ರೋ ನಗರಗಳಲ್ಲಿ ಐದು ಉಚಿತ ವಹಿವಾಟಿನ ನಂತ್ರ 8 ರೂಪಾಯಿ ಜೊತೆ ಜಿಎಸ್‌ಟಿ ಪಾವತಿಸಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...