ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಯಾವುದಾದರೊಂದು ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ.
ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಸಂಪಾದಿಸಿದ ಬಳಿಕ ನೀರಜ್ ಚೋಪ್ರಾ ಸಾಕಷ್ಟು ಕಾರ್ಯಕ್ರಮಗಳಲ್ಲಿ, ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಸಾಕಷ್ಟು ಟೆಲಿವಿಷನ್ ಶೋಗಳಲ್ಲಿಯೂ ಅತಿಥಿಯಾಗಿ ನೀರಜ್ ಆಗಮಿಸಿದ್ದಾರೆ.
ಸ್ವರ್ಣ ಪದಕ ವಿಜೇತ ನೀರಜ್ ಸದ್ಯ ಹಿಂದಿ ರಿಯಾಲಿಟಿ ಶೋಗಳಲ್ಲಿ ಒಂದಾದ ಡ್ಯಾನ್ಸ್ ಪ್ಲಸ್ ಸೀಸನ್ 6ರಲ್ಲಿ ಕಾಣಿಸಿಕೊಂಡ್ರು. ವಿಶೇಷ ಅಂದ್ರೆ ಈ ಕಾರ್ಯಕ್ರಮದಲ್ಲಿ ಕೊರಿಯಾಗ್ರಾಫರ್ ಶಕ್ತಿ ಮೋಹನ್ ಎದುರು ಪ್ರೇಮ ನಿವೇದನೆ ಮಾಡುವ ಮೂಲಕ ನಿರೂಪಕ ರಾಘವ್ ಜುಯಲ್ಗೆ ಚಮಕ್ ನೀಡಿದ್ದಾರೆ.
ಈ ಕಾರ್ಯಕ್ರಮ ಇನ್ನೂ ಪ್ರಸಾರ ಕಂಡಿಲ್ಲ.ಆದರೆ ಕಾರ್ಯಕ್ರಮದ ಪ್ರೋಮೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಮಾತ್ರವಲ್ಲದೇ ನೀರಜ್ ಈ ಕಾರ್ಯಕ್ರಮದ ಮೂಲಕ ತಮ್ಮ ನೃತ್ಯ ಕೌಶಲ್ಯವನ್ನೂ ಪ್ರದರ್ಶಿಸಿದ್ದಾರೆ.
ನನ್ನ ಜೀವನದಲ್ಲಿ ನನಗೆ ಎಲ್ಲಾ ಅವಶ್ಯವಾದದ್ದು ಜಾವೆಲಿನ್ ಆಗಿದೆ. ಇದನ್ನು ಹೊರತುಪಡಿಸಿ ನನಗೆ ಒಳ್ಳೆಯ ಅಡುಗೆ ಮಾಡಲು ಬರುವುದಿಲ್ಲ ಹಾಗೂ ಸಮಯ ನೀಡಲೂ ಸಾಧ್ಯವಾಗುವುದಿಲ್ಲ ಎಂದು ಶಕ್ತಿಗೆ ನೀರಜ್ ಹೇಳೋದನ್ನು ಪ್ರೋಮೋದಲ್ಲಿ ಕಾಣಬಹುದಾಗಿದೆ.
ಇದಕ್ಕೆ ಪ್ರತಿಯಾಗಿ ರಾಘವ್, ನೀವ್ಯಾಕೋ ತಪ್ಪು ಜಾಗದಲ್ಲಿ ಜಾವೆಲಿನ್ ಎಸೆದಂತೆ ಕಾಣ್ತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.