ಬೆಂಗಳೂರು: ಆರ್.ಎಸ್.ಎಸ್ ನವರದ್ದು ’ತಾಲಿಬಾನ್ ಸಂಸ್ಕೃತಿ’ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ತಾಲಿಬಾನಿಗಳಿಗೂ ಆರ್.ಎಸ್.ಎಸ್ ನವರಿಗೂ ಇರುವ ವ್ಯತ್ಯಾಸವೇನು ಎಂಬುದು ಜನರಿಗೆ ಅರ್ಥವಾಗುತ್ತೆ, ಜನರು ದಡ್ಡರಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅರಗ ಜ್ಞಾನೇಂದ್ರ, ಸಿದ್ದರಾಮಯ್ಯನವರು ವಿಪಕ್ಷ ನಾಯಕನಾಗಿ ಹೇಳಬೇಕು ಎಂಬ ಕಾರಣಕ್ಕೆ ಅನಗತ್ಯ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ. ನಮ್ಮನ್ನು ಕೆಣಕಬೇಕು, ಚುಚ್ಚಬೇಕು, ಅಪಹಾಸ್ಯ ಮಾಡಬೆಕು ಎಂಬ ಉದ್ದೇಶದಿಂದ ಇಂಥ ಹೇಳಿಕೆಗಳನ್ನು ನೀಡುವುದು ಶೋಭೆತರಲ್ಲ ಎಂದು ಕಿಡಿಕಾರಿದರು.
BIG NEWS: ʼಸ್ಪಾಟ್ ಫಿಕ್ಸಿಂಗ್ʼ ಪ್ರಕರಣ ಕುರಿತಂತೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀಶಾಂತ್
ರಾಷ್ಟ್ರ ರಕ್ಷಣೆ ಮಾಡಲು ಹೇಳಿಕೊಡುವುದು ಆರ್.ಎಸ್.ಎಸ್. ಮಾತ್ರ ಎಂಬುದು ಜನರಿಗೂ ಗೊತ್ತಿದೆ. ಸಿದ್ದರಾಮಯ್ಯನವರು ಹೊಟ್ಟೆಕಿಚ್ಚು ಪಡುವಷ್ಟು ನಾವು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇವೆ. ಹೀಗಾಗಿ ಅವರು ಆರ್.ಎಸ್.ಎಸ್ ಹಾಗೂ ಬಿಜೆಪಿ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿದರು.