ಪಾಕಿಸ್ತಾನ ಕ್ರಿಕೆಟ್ನ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ಗೆ ಹೃದಯಾಘಾತವಾಗಿದ್ದು ಸೋಮವಾರ ಆಂಜಿಯೋಪ್ಲಾಸ್ಟ್ ಸರ್ಜರಿಗೆ ಒಳಗಾಗಿದ್ದಾರೆ.
ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಕಳೆದ ಮೂರು ದಿನಗಳಿಂದ ಇಂಜಮಾಮ್ ಎದೆ ನೋವಿನಿಂದ ಬಳಲುತ್ತಿದ್ದರು. ಪ್ರಾಥಮಿಕ ಪರೀಕ್ಷೆಗಳಲ್ಲಿ ಇಂಜಮಾಮ್ಗೆ ಯಾವುದೇ ತೊಂದರೆ ಇದ್ದದ್ದು ಕಂಡು ಬಂದಿರಲಿಲ್ಲ. ಆದರೆ ಸೋಮವಾರ ನಡೆಸಲಾದ ಪರೀಕ್ಷೆಯಲ್ಲಿ ಇಂಜಮಾಮ್ಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.
ಕೂಡಲೇ ಇಂಜಮಾಮ್ರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಇಂಜಮಾಮ್ ಆರೋಗ್ಯ ಸದ್ಯ ಸುಧಾರಿಸಿದೆ. ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ.
51 ವರ್ಷದ ಇಂಜಮಾಮ್ ಆಡಿರುವ 375 ಪಂದ್ಯಗಳಲ್ಲಿ 11,701 ರನ್ಗಳನ್ನು ಗಳಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಪಾಕಿಸ್ತಾನದ ಕ್ರಿಕೆಟಿಗ ಎಂಬ ಕೀರ್ತಿಯನ್ನು ಹೊಂದಿದ್ದಾರೆ.
ಯೂನಿಸ್ ಖಾನ್ ಹಾಗೂ ಜಾವೆದ್ ಮಿಯಾಂದದ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನೂ ಇಂಜಮಾಮ್ ಉಲ್ ಹಕ್(8829) ಹೊಂದಿದ್ದಾರೆ.