ಗಾಂಜಾ ಸೇವಿಸಿದ್ದೀರಾ? ನಿಮ್ಮ ಸ್ಮಾರ್ಟ್ ಫೋನು ನೋಡುತ್ತಿದೆ, ಜೋಕೆ ! ಹೌದು, ನೀವು ಅಫೀಮು, ಗಾಂಜಾ ಸೇವನೆ ಮಾಡಿ ಅಮಲೇರಿದರೆ, ನಿಮ್ಮದೇ ಸ್ಮಾರ್ಟ್ ಫೋನ್ ಇಂದ ಗೊತ್ತಾಗುತ್ತದೆಯಂತೆ. ಹಾಗಂತ ನ್ಯೂ ಜರ್ಸಿಯ ರಟ್ ಗರ್ಸ್ ವಿಶ್ವವಿದ್ಯಾಲಯದ ಅಧ್ಯಯನದ ಸಂಶೋಧಕ ಟಾಮಿ ಚುಂಗ್ ತಿಳಿಸಿದ್ದಾರೆ.
ಫೋನಿನಲ್ಲಿ ಇರುವ ಸೆನ್ಸರ್ ಆಧರಿಸಿ, ಒಬ್ಬ ವ್ಯಕ್ತಿಯು ಗಾಂಜಾ ಸೇವಿಸಿ ಅಮಲೇರಿದ್ದಾನಾ ? ಅದು ಅವನನ್ನು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿದೆ, ಎಲ್ಲಿ ಯಾವಾಗ ಎಂದೆಲ್ಲ ತಿಳಿಯಬಹುದು ಚುಂಗ್ ಪ್ರತಿಪಾದಿಸಿದ್ದಾರೆ. ಇದೊಂದು ಜಿಪಿಎಸ್ ನಂತೆ ನಡೆದುಕೊಳ್ಳುತ್ತದೆಯಂತೆ ಎಂದು ತಿಳಿಸಿದ್ದಾರೆ.
ಆರ್.ಎಸ್.ಎಸ್. ನ್ನು ತಾಲಿಬಾನ್ ಗೆ ಹೋಲಿಕೆ ಮಾಡಿದ ಜಾವೇದ್ ಅಖ್ತರ್ ಗೆ ಕೋರ್ಟ್ ನೋಟಿಸ್
ಇವರ ಸಂಶೋಧನೆಯು ಡ್ರಗ್ ಅಂಡ್ ಆಲ್ಕೋಹಾಲ್ ಎಂಬ ಅಂತಾರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟಣೆಗೊಂಡಿದೆ. ವಾರಕ್ಕೆ ಎರಡು ಬಾರಿ ಗಾಂಜಾ ಸೇವಿಸುವ ಯುವಕರ ಫೋನ್ ಸೆನ್ಸಾರ್ ಆಧರಿಸಿ ವರದಿ ಮಾಡಿದ್ದು, ಇದು ಶೇಕಡ 90 ರಷ್ಟು ಸರಿಯಾಗಿದೆ ಎಂದು ಸಾಬೀತಾಗಿದೆ.