ಪ್ರತ್ಯೇಕ ಪ್ರಕರಣಗಳಲ್ಲಿ ಚೆನ್ನೈನ ಏರ್ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 1.588 ಕೆಜಿ ತೂಕದ ಅಂದ್ರೆ 66.34 ಲಕ್ಷ ರೂಪಾಯಿ ಬೆಲೆ ಬಾಳುವ ಅಕ್ರಮ ಚಿನ್ನವನ್ನು ಇಬ್ಬರು ಪ್ರಯಾಣಿಕರಿಂದ ವಶಕ್ಕೆ ಪಡೆದಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರದಿಂದ ಚೆನ್ನೈಗೆ ಹಿಂದಿರುಗಿದ ಪ್ರಯಾಣಿಕರು ತಮ್ಮ ಬ್ಯಾಗುಗಳಲ್ಲಿ ಚಿನ್ನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಪ್ರಯಾಣಿಕರ ಬ್ಯಾಗ್ನಲ್ಲಿದ್ದ ಕಬ್ಬಿಣದ ಸುತ್ತಿಗೆಯ ಒಳಗೆ ಚಿನ್ನವನ್ನು ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆ ಪರಿಶೀಲನೆ ನಡೆಸಿದಾಗ ಇದರಲ್ಲಿ 14.25 ಲಕ್ಷ ರೂಪಾಯಿ ಮೌಲ್ಯದ 341 ಗ್ರಾಂ 24 ಕ್ಯಾರಟ್ ಚಿನ್ನ ಪತ್ತೆಯಾಗಿದೆ. ಈ ಚಿನ್ನವನ್ನು ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕುವೈತ್ನಿಂದ ಬಂದ ಪ್ರಯಾಣಿಕರನು ಕನ್ನಡಿಯ ಫ್ರೆಮ್ನ ಹಿಂಬದಿಯಲ್ಲಿ ಚಿನ್ನವನ್ನು ಅಡಿಗಿಸಿಟ್ಟಿದ್ದ ಎಂದು ತಿಳಿದುಬಂದಿದೆ. ಈ ಪ್ರಯಾಣಿಕನಿಂದ 52.09 ಲಕ್ಷ ರೂಪಾಯಿ ಮೌಲ್ಯದ 1.247 ಕೆಜಿ ತೂಕದ 24 ಕ್ಯಾರಟ್ ಚಿನ್ನ ವಶಕ್ಕೆ ಪಡೆಯಲಾಗಿದೆ. ಇದನ್ನೂ ಸಹ ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ವಶಕ್ಕೆ ಪಡೆಯಲಾಗಿದೆ.