ದೇಶದ ವಿವಿಧೆಡೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಲೇ ಇದೆ. ನಾಚಿಕೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಮಧ್ಯಪ್ರದೇಶದ ನಿಮುಚ್ ಜಿಲ್ಲೆಯಲ್ಲಿ, ಕಾಮುಕರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಹಿಳಾ ಪೊಲೀಸ್ ಪೇದೆ ಮೇಲೆಯೇ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ.
ಸಂತ್ರಸ್ತೆ ಮೂವತ್ತು ವರ್ಷದ ಮಹಿಳಾ ಪೊಲೀಸ್ ಪೇದೆಯಾಗಿದ್ದು, ಈಕೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಇದರಲ್ಲಿ ಆರೋಪಿಯ ತಾಯಿ ಕೂಡ ಇದ್ದಾರೆ ಎನ್ನಲಾಗಿದೆ.
ರಸ್ತೆ ಗುಂಡಿ ಸರಿಪಡಿಸದ ಇಂಜಿನಿಯರ್ಗಳಿಗೆ ಅಮಾನತು ಶಿಕ್ಷೆ…!
ಆರೋಪಿಯು ಮಹಿಳಾ ಪೇದೆಗೆ ಫೇಸ್ಬುಕ್ ಮುಖಾಂತರ ಪರಿಚಯವಾಗಿದ್ದು ವಾಟ್ಸಪ್ ನಲ್ಲೂ ಮಾತುಕತೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಮಧ್ಯೆ ಆರೋಪಿಯು ತನ್ನ ತಮ್ಮನ ಹುಟ್ಟುಹಬ್ಬಕ್ಕೆ ಸಂತ್ರಸ್ತೆಗೆ ಆಹ್ವಾನಿಸಿದ್ದು, ಅಲ್ಲಿ ತನ್ನ ತಮ್ಮ ಮತ್ತು ಸ್ನೇಹಿತನೊಂದಿಗೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ.
ದೂರಿನಲ್ಲಿ ಸಂತ್ರಸ್ತೆಯು ಆರೋಪಿಯ ತಾಯಿ ಹಾಗೂ ಮತ್ತೋರ್ವ ಸಂಬಂಧಿ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಪ್ರಕರಣ ತನಿಖೆ ನಡೆಯುತ್ತಿದೆ. ಮಹಿಳಾ ಪೊಲೀಸ್ ಮೇಲೆಯೇ ಪೈಶಾಚಿಕ ಕೃತ್ಯ ನಡೆದಿರುವುದು ದಿಗ್ಭ್ರಮೆ ಮೂಡಿಸಿದೆ.