alex Certify ರಸ್ತೆ ಗುಂಡಿ ಸರಿಪಡಿಸದ ಇಂಜಿನಿಯರ್​​ಗಳಿಗೆ ಅಮಾನತು ಶಿಕ್ಷೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಗುಂಡಿ ಸರಿಪಡಿಸದ ಇಂಜಿನಿಯರ್​​ಗಳಿಗೆ ಅಮಾನತು ಶಿಕ್ಷೆ…!

ನಗರದ ಕೆಟ್ಟ ರಸ್ತೆಗಳಿಗೆ ಪಾಲಿಕೆ ನಾಲ್ವರು ಇಂಜಿನಿಯರ್​ಗಳೇ ನೇರ ಹೊಣೆ ಎಂದು ಹೇಳಿದ ಮಹಾರಾಷ್ಟ್ರದ ಥಾಣೆ ನಾಗರಿಕ ಆಯುಕ್ತ ಡಾ. ವಿಪಿನ್​ ಶರ್ಮಾ ಅವರನ್ನು ಅಮಾನತುಗೊಳಿಸಿದ್ದಾರೆ.

ಈ ನಾಲ್ವರು ಇಂಜಿನಿಯರ್​ಗಳು ರಸ್ತೆಗಳಲ್ಲಿ ಗುಂಡಿ ತುಂಬಿಸುವ ಕಾರ್ಯ ಮಾಡಿಲ್ಲ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯ ಬಗ್ಗೆಯೂ ಲಕ್ಷ್ಯ ನೀಡಿಲ್ಲ ಎಂದು ಶರ್ಮಾ ಹೇಳಿದ್ದಾರೆ.

ಉತ್ತಲ್ಸರ್​​ ವಾರ್ಡ್ ಎಕ್ಸಿಕ್ಯೂಟಿವ್​ ಇಂಜಿನಿಯರ್ ಚೇತನ್​ ಪಡೆಲ್​, ವಾರ್ತಾಕ್​ ನಗರ ವಾರ್ಡ್​ನ ಪ್ರಕಾಶ್​ ಕಡ್ತಾರೆ, ಜ್ಯೂನಿಯರ್​ ಇಂಜಿನಿಯರ್​ ಸಂದೀಪ್​ ಸಾವಂತ್​ ಹಾಗೂ ಲೋಕಮಾನ್ಯ ಸಾರ್ವಕರ್​ ನಗರ ವಾರ್ಡ್​ನ ಸಂದೀಪ್​ ಗಾಯಕ್ವಾಡ್​ರನ್ನು ಅಮಾನತು ಮಾಡಲಾಗಿದೆ.

ಸಚಿವ ಏಕನಾಥ ಶಿಂಧೆ ಶುಕ್ರವಾರ ನಗರದ ರಸ್ತೆಗಳ ಸಮೀಕ್ಷೆ ನಡೆಸಿದ ಬೆನ್ನಲ್ಲೇ ಪಾಲಿಕೆಯಿಂದ ಈ ನಿರ್ಧಾರ ಇಂದು ಹೊರಬಿದ್ದಿದೆ. ರಸ್ತೆಗಳ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...