ನಗರದ ಕೆಟ್ಟ ರಸ್ತೆಗಳಿಗೆ ಪಾಲಿಕೆ ನಾಲ್ವರು ಇಂಜಿನಿಯರ್ಗಳೇ ನೇರ ಹೊಣೆ ಎಂದು ಹೇಳಿದ ಮಹಾರಾಷ್ಟ್ರದ ಥಾಣೆ ನಾಗರಿಕ ಆಯುಕ್ತ ಡಾ. ವಿಪಿನ್ ಶರ್ಮಾ ಅವರನ್ನು ಅಮಾನತುಗೊಳಿಸಿದ್ದಾರೆ.
ಈ ನಾಲ್ವರು ಇಂಜಿನಿಯರ್ಗಳು ರಸ್ತೆಗಳಲ್ಲಿ ಗುಂಡಿ ತುಂಬಿಸುವ ಕಾರ್ಯ ಮಾಡಿಲ್ಲ ಹಾಗೂ ಗುತ್ತಿಗೆದಾರರ ಕಳಪೆ ಕಾಮಗಾರಿಯ ಬಗ್ಗೆಯೂ ಲಕ್ಷ್ಯ ನೀಡಿಲ್ಲ ಎಂದು ಶರ್ಮಾ ಹೇಳಿದ್ದಾರೆ.
ಉತ್ತಲ್ಸರ್ ವಾರ್ಡ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಚೇತನ್ ಪಡೆಲ್, ವಾರ್ತಾಕ್ ನಗರ ವಾರ್ಡ್ನ ಪ್ರಕಾಶ್ ಕಡ್ತಾರೆ, ಜ್ಯೂನಿಯರ್ ಇಂಜಿನಿಯರ್ ಸಂದೀಪ್ ಸಾವಂತ್ ಹಾಗೂ ಲೋಕಮಾನ್ಯ ಸಾರ್ವಕರ್ ನಗರ ವಾರ್ಡ್ನ ಸಂದೀಪ್ ಗಾಯಕ್ವಾಡ್ರನ್ನು ಅಮಾನತು ಮಾಡಲಾಗಿದೆ.
ಸಚಿವ ಏಕನಾಥ ಶಿಂಧೆ ಶುಕ್ರವಾರ ನಗರದ ರಸ್ತೆಗಳ ಸಮೀಕ್ಷೆ ನಡೆಸಿದ ಬೆನ್ನಲ್ಲೇ ಪಾಲಿಕೆಯಿಂದ ಈ ನಿರ್ಧಾರ ಇಂದು ಹೊರಬಿದ್ದಿದೆ. ರಸ್ತೆಗಳ ಅವ್ಯವಸ್ಥೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದರು.