ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನಕ್ಕೆ ಕಟುವಾಗಿ ತಿರುಗೇಟು ನೀಡಿರುವ ಭಾರತದ ವಿದೇಶಾಂಗ ಇಲಾಖೆ ಅಧಿಕಾರಿ ಸ್ನೇಹಾ ದುಬೆ ಅವರಿಗೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಾಶ್ಮೀರ ಕುರಿತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಸಿಡಿದೆದ್ದ ಸ್ನೇಹಾ ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ಯಾರಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ. ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿರುವ ಕಾಶ್ಮೀರದ ಭಾಗಗಳನ್ನು ಪಾಕಿಸ್ತಾನವು ಬಿಟ್ಟು ಹೊರಡಬೇಕು ಎಂದು ಹೇಳಿದ್ದಾರೆ.
ಶಾಕಿಂಗ್: ಮಾವುತನನ್ನು ಏಕಾಏಕಿ ನೆಲಕ್ಕೆ ಕೆಡವಿದ ಆನೆ..!
ಪಾಕ್ ವಿರುದ್ಧ ತನ್ನ ಮಾತಿನ ಸಮರ ಸಾರಿದ ವಿಶ್ವಸಂಸ್ಥೆಯ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ಅವರ ಮಾತುಗಳು ಇದೀಗ ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗಿದ್ದು, ಭಾರತೀಯರು ಶಹಬ್ಬಾಸ್ ಎಂದಿದ್ದಾರೆ.
“ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿರುವುದು, ಸಹಾಯ ಮಾಡುತ್ತಿರುವುದು ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ತಿಳಿದಿದೆ. ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಪಾಕಿಸ್ತಾನವು ಅಗ್ನಿಶಾಮಕ ದಳದ ವೇಷ ಧರಿಸುತ್ತಿದೆ” ಎಂದು ಸ್ನೇಹಾ ಕಿಡಿಕಾರಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಗೆ ತಿರುಗೇಟು ಕೊಟ್ಟ ಸ್ನೇಹಾ ದುಬೆ ಭಾಷಣ ಟ್ವಿಟ್ಟರ್ ನ ಟ್ರೆಂಡ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ‘ನಿಮ್ಮ ಬಗ್ಗೆ ಹೆಮ್ಮೆ ಇದೆ’ ಎಂದು ಸ್ನೇಹಾ ದುಬೆ ಬಗ್ಗೆ ಟ್ವಿಟ್ಟರ್ ಬಳಕೆದಾರರು ಹರ್ಷ ವ್ಯಕ್ತಪಡಿಸಿದ್ದಾರೆ.
https://twitter.com/S1Rajput2/status/1441643826926391297?ref_src=twsrc%5Etfw%7Ctwcamp%5Etweetembed%7Ctwterm%5E1441643826926391297%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Findia-s-sneha-dubey-trends-online-for-powerful-response-to-pakistan-at-un-proud-of-you-says-twitter-1857093-2021-09-25