ಕಳೆದ 2 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್ ಬೆಲೆ ಏರಿಕೆ ಕಂಡಿದೆ. ಇಂದು ಪ್ರತಿ ಲೀಟರ್ ಡೀಸೆಲ್ ದರದಲ್ಲಿ 20 ಪೈಸೆ ಏರಿಕೆ ಕಂಡಿದೆ.
ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 88.82 ರೂಪಾಯಿ ಆಗಿದ್ದರೆ ಮುಂಬೈನಲ್ಲಿ ಪ್ರತಿ ಲೀಟರ್ ಡೀಸೆಲ್ ದರವು 96.41 ರೂಪಾಯಿ ಆಗಿತ್ತು. ಅಂದ ಹಾಗೆ ಪೆಟ್ರೋಲ್ ದರದಲ್ಲಿ ಯಾವುದೇ ರೀತಿಯ ಬದಲಾವಣೆಯು ಕಂಡು ಬಂದಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.19 ರೂಪಾಯಿ ಆಗಿದ್ದರೆ ಮುಂಬೈನಲ್ಲಿ ಈ ದರ 107.26 ರೂಪಾಯಿ ಆಗಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂಗಳು ಸೆಪ್ಟೆಂಬರ್ 5ರಿಂದ ಅಂತಾರಾಷ್ಟ್ರೀಯ ತೈಲ ದರ ಏರಿಕೆಯ ಹೊರತಾಗಿಯೂ ಇಂಧನ ದರವನ್ನು ಪರಿಷ್ಕರಣೆ ಮಾಡಿಲ್ಲ.
ಸುಮಾರು ಮೂರು ವಾರಗಳಿಂದ ತೈಲೋತ್ಪನ್ನಗಳ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡದ ಕಂಪನಿಗಳು ಇದೀಗ ದರ ಪರಿಷ್ಕರಣೆಗೆ ಮುಂದಾದಂತೆ ಕಾಣುತ್ತಿದೆ. ಈ ಮೂಲಕ ತೈಲ ಬೆಲೆಯೇರಿಕೆ ಬಿಸಿ ಮತ್ತೊಮ್ಮೆ ಗ್ರಾಹಕರಿಗೆ ತಲುಪಿದೆ.