alex Certify ಬರೋಬ್ಬರಿ 2 ತಿಂಗಳ ಬಳಿಕ ಡೀಸೆಲ್​ ದರದಲ್ಲಿ ಏರಿಕೆ, ಪೆಟ್ರೋಲ್​ ದರ ಯಥಾಸ್ಥಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 2 ತಿಂಗಳ ಬಳಿಕ ಡೀಸೆಲ್​ ದರದಲ್ಲಿ ಏರಿಕೆ, ಪೆಟ್ರೋಲ್​ ದರ ಯಥಾಸ್ಥಿತಿ

ಕಳೆದ 2 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಡೀಸೆಲ್​ ಬೆಲೆ ಏರಿಕೆ ಕಂಡಿದೆ. ಇಂದು ಪ್ರತಿ ಲೀಟರ್​ ಡೀಸೆಲ್​ ದರದಲ್ಲಿ 20 ಪೈಸೆ ಏರಿಕೆ ಕಂಡಿದೆ.
ದೆಹಲಿಯಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ 88.82 ರೂಪಾಯಿ ಆಗಿದ್ದರೆ ಮುಂಬೈನಲ್ಲಿ ಪ್ರತಿ ಲೀಟರ್​ ಡೀಸೆಲ್​ ದರವು 96.41 ರೂಪಾಯಿ ಆಗಿತ್ತು. ಅಂದ ಹಾಗೆ ಪೆಟ್ರೋಲ್​ ದರದಲ್ಲಿ ಯಾವುದೇ ರೀತಿಯ ಬದಲಾವಣೆಯು ಕಂಡು ಬಂದಿಲ್ಲ. ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 101.19 ರೂಪಾಯಿ ಆಗಿದ್ದರೆ ಮುಂಬೈನಲ್ಲಿ ಈ ದರ 107.26 ರೂಪಾಯಿ ಆಗಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್​ ಆಯಿಲ್​, ಭಾರತ್​ ಪೆಟ್ರೋಲಿಯಂ, ಹಿಂದೂಸ್ತಾನ್​ ಪೆಟ್ರೋಲಿಯಂಗಳು ಸೆಪ್ಟೆಂಬರ್​ 5ರಿಂದ ಅಂತಾರಾಷ್ಟ್ರೀಯ ತೈಲ ದರ ಏರಿಕೆಯ ಹೊರತಾಗಿಯೂ ಇಂಧನ ದರವನ್ನು ಪರಿಷ್ಕರಣೆ ಮಾಡಿಲ್ಲ.

ಸುಮಾರು ಮೂರು ವಾರಗಳಿಂದ ತೈಲೋತ್ಪನ್ನಗಳ ದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡದ ಕಂಪನಿಗಳು ಇದೀಗ ದರ ಪರಿಷ್ಕರಣೆಗೆ ಮುಂದಾದಂತೆ ಕಾಣುತ್ತಿದೆ. ಈ ಮೂಲಕ ತೈಲ ಬೆಲೆಯೇರಿಕೆ ಬಿಸಿ ಮತ್ತೊಮ್ಮೆ ಗ್ರಾಹಕರಿಗೆ ತಲುಪಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...