ಕೊರೊನಾ ಮಹಾಮಾರಿಯಿಂದಾಗಿ ಪ್ರವಾಸೋದ್ಯಮದಲ್ಲಿ ಕುಂಠಿತ ಉಂಟಾದ ಹಿನ್ನೆಲೆಯಲ್ಲಿ ಮೈಸೂರು ರಾಜಮನೆತನದ ಆನೆಗಳು ಗುಜರಾತ್ ಗೆ ಸ್ಥಳಾಂತರಗೊಳ್ಳಲಿವೆ. ಸದ್ಯ ಅರಮನೆಯಲ್ಲಿ 6 ಆನೆಗಳಿದ್ದು ಇದರಲ್ಲಿ ನಾಲ್ಕು ಆನೆಗಳನ್ನು ಗುಜರಾತ್ಗೆ ಸ್ಥಳಾಂತರಿಸಲು ಸಿದ್ಧತೆ ನಡೆಯುತ್ತಿದೆ.
ಸದ್ಯ ಮೈಸೂರು ಅರಮನೆಯಲ್ಲಿ ಆರು ಆನೆಗಳಿದ್ದು ಪ್ರತಿನಿತ್ಯ ಆನೆಗಳ ನಿರ್ವಹಣೆಗೆ ತಲಾ 10 ಸಾವಿರ ರೂಪಾಯಿ ಖರ್ಚು ತಗಲುತ್ತದೆ. ಹೀಗಾಗಿ ತಿಂಗಳಿಗೆ ಆರು ಆನೆಗಳ ನಿರ್ವಹಣೆಗೆ ಕಡಿಮೆ ಅಂದರೂ 18 ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ ಪ್ರವಾಸೋದ್ಯಮ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಆನೆಗಳ ನಿರ್ವಹಣೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
ದಸರಾ ದಿನದಂದು ಪೂಜೆ ಕಾರ್ಯಕ್ಕೆ ಈ ಆನೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಕೇವಲ 2 ಆನೆಗಳನ್ನು ಮಾತ್ರ ಇಲ್ಲಿ ಉಳಿಸಿಕೊಂಡು ಉಳಿದ ಆನೆಗಳನ್ನು ಗುಜರಾತ್ಗೆ ಕಳುಹಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ರಾಜಮನೆತನ ಮಾಹಿತಿ ನೀಡಿದೆ. ಸೀತಾ, ರೂಬಿ, ರಾಜೇಶ್ವರಿ ಹಾಗೂ ಜೆಮಿನಿ ಗುಜರಾತ್ಗೆ ತೆರಳಲಿವೆ. ಇನ್ನುಳಿದಂತೆ ಚಂಚಲ್ ಹಾಗೂ ಪ್ರೀತಿ ಅರಮನೆಯಲ್ಲಿಯೇ ಉಳಿಯಲಿವೆ.
ಹಬ್ಬದ ಋತುವಿನ ಸಂಭ್ರಮ ಹೆಚ್ಚಿಸಲು ಕಡಿಮೆ ಬಡ್ಡಿ ದರದಲ್ಲಿ ʼಗೃಹ ಸಾಲʼ
ಗುಜರಾತ್ನ ಇಸ್ಕಾನ್ನಲ್ಲಿ ಈಗಾಗಲೇ 50 ಆನೆಗಳಿದ್ದು, ಇದೇ ಸಾಲಿಗೆ ಇದೀಗ ನಾಲ್ಕು ಆನೆಗಳು ತೆರಳಲಿವೆ. ಇವುಗಳಲ್ಲಿ ಎರಡು ಆನೆಗಳು 32 ವರ್ಷ ಪ್ರಾಯದ್ದಾಗಿದ್ದರೆ ನಾಲ್ಕು ಆನೆಗಳು 18 ವರ್ಷ ಪ್ರಾಯದ್ದಾಗಿವೆ. ಬಾಂಬೆ ಸರ್ಕಸ್ ಮೇಲೆ ದಾಳಿ ನಡೆಸಿದ್ದ ಅರಣ್ಯ ಇಲಾಖೆ ಆನೆಗಳನ್ನು ವಶಕ್ಕೆ ಪಡೆದಿತ್ತು. ಆನೆಗಳ ನಿರ್ವಹಣೆಯ ಜವಾಬ್ದಾರಿಯನ್ನು ನರಸಿಂಹರಾಜ ಒಡೆಯರ್ ಹೊತ್ತಿದ್ದರು. ಅಂದಿನಿಂದ ಆನೆಗಳು ಅರಮನೆಯಲ್ಲಿಯೇ ಉಳಿದಿದ್ದವು.