ನಟನೆಯಲ್ಲೂ ನೀರಜ್ ಚೋಪ್ರಾ ಕಮಾಲ್..! ಚಿನ್ನದ ಹುಡುಗನ ಮೊದಲ ಜಾಹೀರಾತು ಸಖತ್ ವೈರಲ್ 21-09-2021 1:36PM IST / No Comments / Posted In: Featured News, Live News, Entertainment ಟೋಕಿಯೋ ಒಲಿಂಪಿಕ್ಸ್ನಲ್ಲಿ ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ಸ್ವರ್ಣ ಸಂಪಾದನೆ ಮಾಡಿದಾಗಿನಿಂದ ನೀರಜ್ ಚೋಪ್ರಾ ಮನೆ ಮಾತಾಗಿದ್ದಾರೆ. ಚಿನ್ನದ ಹುಡುಗ ನೀರಜ್ ಚೋಪ್ರಾ ಮತ್ತೊಮ್ಮೆ ಜನರನ್ನು ಇಂಪ್ರೆಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಬಾರಿ ನೀರಜ್ ಜ್ಯಾವೆಲಿನ್ ಬದಲು ನಟನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅರೆ..! ನೀರಜ್ ಹಾಗೂ ನಟನೆ..? ಎಂದು ಯೋಚನೆ ಮಾಡುತ್ತಿದ್ದೀರಾ..? ಹೌದು, ನೀರಜ್ ಇದೇ ಮೊದಲ ಬಾರಿಗೆ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ನೀರಜ್ ಚೋಪ್ರಾ ಮೊಟ್ಟ ಮೊದಲ ಬಾರಿಗೆ ಕ್ರೆಡ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿನ ದೃಶ್ಯಾವಳಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೀರಜ್ ಶೇರ್ ಮಾಡಿದ್ದು ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ. ಈ ಜಾಹಿಹೀರಾತಿನಲ್ಲಿ ನೀರಜ್ರ ನಟನೆ ಕಮಾಲ್ ಮಾಡುವಂತಿದೆ. ಇದನ್ನು ನೋಡಿದ ಹರ್ಷ್ ಬೆನಿವಾಲ್, ನಟನೆಯಲ್ಲೂ ನಿಮಗೆ ಬಂಗಾರದ ಪದಕವೇ ಸಿಗಬೇಕು ಎಂದಿದ್ದಾರೆ. ಇದು ಮಾತ್ರವಲ್ಲದೇ ನೀರಜ್ರ ನಟನೆಯನ್ನು ಹೊಗಳುವಂತಹ ಸಾಕಷ್ಟು ಕಮೆಂಟ್ಗಳು ಹರಿದಾಡುತ್ತಿವೆ. View this post on Instagram A post shared by Neeraj Chopra (@neeraj____chopra)