ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋ ಮೂಲದ ಮೋಟಾರ್ ಬೈಕ್ ತಯಾರಿಕೆಯ ದಿಗ್ಗಜ ಕಂಪನಿ ’ಹಾರ್ಲೆ ಡೇವಿಡ್ಸನ್’ ವರ್ಷಾಂತ್ಯಕ್ಕೆ ನೂರು ವರ್ಷಗಳ ಹಳೆಯ ವಿನ್ಯಾಸವುಳ್ಳ ನೂತನ ಎಲೆಕ್ಟ್ರಿಕ್ ಬೈಸಿಕಲ್ವೊಂದನ್ನು ಮಾರುಕಟ್ಟೆಗೆ ತರಲಿದೆ.
ಅದರ ಹೆಸರು ’ಸೀರಿಯಲ್ 1’. 1903ರಲ್ಲಿ ಕಂಪನಿ ತಯಾರಿಸಿದ ಮೊದಲ ಮೋಟಾರ್ ಸೈಕಲ್ ಹೊಂದಿದ್ದ ವಿನ್ಯಾಸವನ್ನೇ ಮರುಸೃಷ್ಟಿಸಿ ಎಲೆಕ್ಟ್ರಿಕ್ ಸೈಕಲ್ ಸಿದ್ಧಪಡಿಸಲಾಗಿದೆ. ಆರಂಭದಲ್ಲಿ 650 ಸೈಕಲ್ಗಳನ್ನು ಮಾತ್ರವೇ ಉತ್ಪಾದಿಸಿ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗೆ ಬಿಡುವ ಯೋಜನೆ ಕಂಪನಿಯದ್ದಾಗಿದೆ.
ಇ-ಬೈಸಿಕಲ್ ಕ್ರಾಂತಿಯನ್ನು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಮುಂದಿನ 10 ವರ್ಷಗಳಲ್ಲಿ ಕಾಣಲಿವೆ. ಇದಕ್ಕೆ ಸಿದ್ಧತೆಯೂ ಆರಂಭಗೊಂಡಿದೆ. ಜಾಗತಿಕ ಇ-ಬೈಸಿಕಲ್ ಮಾರುಕಟ್ಟೆಯ ವಹಿವಾಟು ಸುಮಾರು 20 ಬಿಲಿಯನ್ ಡಾಲರ್ ಇದೆ. ಇದರ ಲಾಭ ಪಡೆಯಲು ಎಲ್ಲ ಮೋಟಾರ್ ವಾಹನ ತಯಾರಿಕೆ ಕಂಪನಿಗಳು ಮುಂದಾಗುತ್ತಿವೆ ಎಂದು ಸೀರಿಯಲ್ 1 ಸೈಕಲ್ ಕಂಪನಿಯ ಮುಖ್ಯಸ್ಥ ಏರನ್ ಫ್ರಾಂಕ್ ಹೇಳಿದ್ದಾರೆ.
BIG NEWS: ಸ್ವಾಗತ ಭಾಷಣಕ್ಕೆ ಸಿಎಂ ಗರಂ; ಸಮಯಕ್ಕೆ ಮಹತ್ವ ಕೊಡಿ; ಕಾರ್ಯಕ್ರಮದ ಆಯೋಜಕರಿಗೆ ಆರಂಭದಲ್ಲೇ ಚಾಟಿ ಬೀಸಿದ ಬೊಮ್ಮಾಯಿ
‘ಬಿಎಂಡಬ್ಲೂ’ ಕಂಪನಿಯು ಹೊಸ ಎಲೆಕ್ಟ್ರಿಕ್ ಬೈಕ್ ಮತ್ತು ಮೋಟಾರ್ ಸೈಕಲ್ ಸಿದ್ಧತೆಯಲ್ಲಿದೆ. ಅದೇ ರೀತಿ ‘ಆಡಿ’ ಕಂಪನಿಯು ಎಲೆಕ್ಟ್ರಿಕ್ ಮೌಂಟೆನ್ ಬೈಕ್ ತಯಾರಿಕೆಯಲ್ಲಿ ನಿರತವಾಗಿದೆ. ‘ಮರ್ಸಿಡೀಸ್ ಬೆಂಜ್’ನ ಎಲೆಕ್ಟ್ರಿಕ್ ಸ್ಕೂಟರ್ ಈಗಾಗಲೇ ಅನಾವರಣಗೊಂಡಿದೆ. ಇ-ಸ್ಕೂಟರ್ ತಯಾರಿಕೆಗಾಗಿ ಫೋರ್ಡ್ ಕಂಪನಿ ‘ಸ್ಪಿನ್’ ಎಂಬ ಸ್ಟಾರ್ಟ್ಅಪ್ ಖರೀದಿಸಿದೆ.