alex Certify ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಜಿ ಸಚಿವ ರಾಜೀಂದರ್‌ ಪಾಲ್ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಜಿ ಸಚಿವ ರಾಜೀಂದರ್‌ ಪಾಲ್ ಸಿಂಗ್

ಛತ್ತೀಸ್‌ಘಡ ಸರ್ಕಾರದ ಮಾಜಿ ಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ರಾಜೀಂದರ್‌ ಪಾಲ್ ಸಿಂಗ್ ಭಾಟಿಯಾ ರಾಜ್‌ನಂದಗಾಂವ್‌ ಜಿಲ್ಲೆಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯ ಪ್ರಕರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಛುರಿಯಾ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿ ಭಾಟಿಯಾ, 72, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಆತ್ಮಹತ್ಯೆಯ ಪತ್ರವೇನಾದರೂ ಸಿಕ್ಕಿದೆಯೇ ಎಂಬ ಬಗ್ಗೆ ಪೊಲೀಸರು ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ಆರ್ಮಿ ಕಮಾಂಡೋ ಯುನಿರ್ಫಾರ್ಮ್ ನಲ್ಲಿ ವಿಡಿಯೋಕಾಲ್; ಪಾಕಿಸ್ತಾನದ ISI ಜೊತೆ ಸಂಪರ್ಕ; ಬಟ್ಟೆ ವ್ಯಾಪಾರಿಯ ಖತರ್ನಾಕ್ ಕೆಲಸ ಬಿಚ್ಚಿಟ್ಟ ಸಿಸಿಬಿ

ಈ ವರ್ಷದ ಮಾರ್ಚ್‌‌ನಲ್ಲಿ ಕೋವಿಡ್‌‌ಗೆ ಒಳಗಾಗಿದ್ದ ಭಾಟಿಯಾ, ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಸಂಪೂರ್ಣವಾದಿ ಆರೋಗ್ಯವಾಗಿರಲಿಲ್ಲ.

ರಾಜ್ಯದ ಖುಜ್ಜಿ ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಭಾಟಿಯಾ ಛತ್ತೀಸ್‌ಘಡದಲ್ಲಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರವಿದ್ದಾಗ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...