ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲ ಇಂದಿನಿಂದ ಭಕ್ತರ ದರ್ಶನಕ್ಕೆ ಮುಕ್ತ 18-09-2021 12:13PM IST / No Comments / Posted In: Latest News, India, Live News ಕೊರೊನಾ ಮೂರನೆ ಅಲೆಯ ಆತಂಕಗಳ ನಡುವೆಯೂ ಓಡಿಶಾ ಸರ್ಕಾರವು ದೇಗುಲ ಸೇರಿದಂತೆ ವಿವಿಧ ಧಾರ್ಮಿಕ ಸಂಸ್ಥೆಗಳಲ್ಲಿ ಕೋವಿಡ್ ನಿಯಮಗಳನ್ನು ಸಡಿಲಗೊಳಿಸುತ್ತಿದೆ. ಕೋವಿಡ್ ಮುಂಜಾಗ್ರತಾ ಕ್ರಮಗಳ ಜೊತೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅನುಮತಿ ನೀಡಿದೆ. ಇಂದಿನಿಂದ ಜಗತ್ಪ್ರಸಿದ್ಧ ಪುರಿ ಜಗನ್ನಾಥ ದೇಗುಲ ಕೂಡ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ವಾರದ ಮೊದಲ ಐದು ದಿನಗಳು ದೇಗುಲವು ಭಕ್ತರ ದರ್ಶನಕ್ಕೆ ತೆರಯಲಿದೆ. ಜಗನ್ನಾಥ ದೇವಸ್ಥಾನವನ್ನು ನಾಲ್ಕು ತಿಂಗಳ ಅಂತರದ ನಂತರ ಆಗಸ್ಟ್ 23 ರಂದು ಭಕ್ತರಿಗಾಗಿ ತೆರೆಯಲಾಯಿತು. ಕೋವಿಡ್ ಭಯವನ್ನೂ ಗಮನದಲ್ಲಿಟ್ಟುಕೊಂಡು ಭಕ್ತರಿಗೆ ಕೋವಿಡ್ ಲಸಿಕೆ ಪಡೆದ ಅಂತಿಮ ಪ್ರಮಾಣ ಪತ್ರವನ್ನು ನೀಡುವಂತೆ ಅಥವಾ ಕೋವಿಡ್ ನೆಗೆಟಿವ್ ವರದಿಯನ್ನು ಕೊಡುವಂತೆ ಸೂಚನೆ ನೀಡಲಾಗಿದೆ. 96 ಗಂಟೆಯ ಒಳಗಾಗಿ ಮಾಡಲಾದ ಕೋವಿಡ್ ಪರೀಕ್ಷಾ ವರದಿಗೆ ಮಾತ್ರ ಮಾನ್ಯತೆ ಇದೆ. ದೇಗುಲಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರಿಗೆ ಫೋಟೋ ಐಡಿ ಕಾರ್ಡ್ ಅಂದರೆ ಆಧಾರ್ ಅಥವಾ ವೋಟರ್ ಐಡಿ ನೀಡಿವುದು ಕಡ್ಡಾಯವಾಗಿದೆ. ಸಿಂಘದ್ವಾರದಲ್ಲಿ ಎಂಟ್ರಿ ಪಡೆದ ಭಕ್ತರು ಉತ್ತರದ್ವಾರದಲ್ಲಿ ಹೊರ ಬೀಳಲಿದ್ದಾರೆ. ದರ್ಶನ ವೇಳೆಯಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ದೇಗುಲಕ್ಕೆ ಎಂಟ್ರಿ ನೀಡುವ ಮುನ್ನ ಕೈಗಳನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯವಾಗಿದೆ. #WATCH | Odisha: Shree Jagannath Temple in Puri district reopens for devotees on Saturdays from today. The temple was earlier open for 5 days every week. (Video Source: Shree Jagannath Temple) pic.twitter.com/qdeaD3qp73 — ANI (@ANI) September 18, 2021