ಚಹದ ಜೊತೆಗೆ ಬಿಸ್ಕಟ್, ರಸ್ಕ್ಗಳನ್ನು ಇಷ್ಟಪಡುವವರ ಪೈಕಿ ನೀವು ಒಬ್ಬರಾಗಿದ್ದರೆ ಈ ವಿಡಿಯೋವನ್ನೊಮ್ಮೆ ನೋಡಿ ಬಿಡಿ. ಮುಂದೆಂದೂ ನೀವು ರಸ್ಕ್ ಸೇವನೆ ಮಾಡುವ ಬಗ್ಗೆ ಯೋಚನೆ ಮಾಡಲು ಕೂಡ ಹೋಗೋದಿಲ್ಲ.
ಫ್ಯಾಕ್ಟರಿಯೊಂದರಲ್ಲಿ ಕಾರ್ಮಿಕರೆಲ್ಲ ಸೇರಿ ರಸ್ಕ್ ತಯಾರಿಸುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿ ಕಾರ್ಮಿಕರು ಪ್ಯಾಕ್ ಮಾಡುವ ಮುನ್ನ ಟ್ರೇನಲ್ಲಿ ಇಡಲಾಗಿದ್ದ ರಸ್ಕ್ಗಳನ್ನು ಬೇಕಂತಲೆ ಮೆಟ್ಟಿದ್ದಾರೆ. ಇದು ಸಾಲದು ಎಂಬಂತೆ ಓರ್ವ ಕಾರ್ಮಿಕನಂತೂ ಪ್ಯಾಕೆಟ್ನಲ್ಲಿ ರಸ್ಕ್ಗಳನ್ನು ಇರಿಸುವ ಮುನ್ನ ನೆಕ್ಕಿ ಕೂಡ ನೋಡಿದ್ದಾನೆ. ಕಾರ್ಮಿಕರು ಬೇಕಂತಲೆ ಈ ರೀತಿ ಮಾಡ್ತಿದ್ದಾರೆ ಅನ್ನೋದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅನೇಕರು ಇನ್ಮೇಲೆ ಟೋಸ್ಟ್ – ರಸ್ಕ್ ಸೇವನೆ ಮಾಡೋದೇ ಇಲ್ಲ ಎಂದು ಹೇಳಿದರೆ ಇನ್ನು ಹಲವರು ಈ ಕಾರ್ಮಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.
https://www.instagram.com/p/CT4QHsilsGC/?utm_source=ig_web_copy_link