61 ವರ್ಷದ ವೃದ್ಧೆ ತನ್ನ 24 ವರ್ಷದ ಬಾಯ್ಫ್ರೆಂಡ್ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.
24 ವರ್ಷದ ಖರನ್ ಮೆಕೇನ್ ಹಾಗೂ 61 ವರ್ಷದ ಚೆರಿಲ್ ಮೆಕ್ಗ್ರೆಗರ್ ಸೆಪ್ಟೆಂಬರ್ 3ರಂದು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇವರು ಅಮೆರಿಕ ನಿವಾಸಿಗಳಾಗಿದ್ದಾರೆ.
ಅನೇಕರು ಇವರನ್ನು ಅಜ್ಜಿ – ಮೊಮ್ಮಗ ಎಂದು ಜರಿದರೂ ಸಹ ನಮ್ಮ ಪ್ರೀತಿ ಅಗಾಧವಾಗಿದೆ ಎಂದು ಈ ದಂಪತಿ ಹೇಳಿದ್ದಾರೆ.
ಟಿಕ್ಟಾಕ್ ಖಾತೆಯಲ್ಲಿ ಈ ದಂಪತಿ ತಮ್ಮ ಮದುವೆ ಲೈವ್ ವಿಡಿಯೋ ಪ್ರಸಾರ ಮಾಡಿತ್ತು. 61 ವರ್ಷ ವಯಸ್ಸಿನ ಮಧುಮಗಳು ಶ್ವೇತ ವರ್ಣದ ಧಿರಿಸಿನಲ್ಲಿದ್ದರೆ ಖರನ್ ಕಂದು ಬಣ್ಣದ ಸೂಟನ್ನು ಧರಿಸಿದ್ದರು. ಮದುವೆಯ ದಿನ ನಾವು ಟಿಕ್ಟಾಕ್ನಲ್ಲಿ ಲೈವ್ ಬಂದಿದ್ದೆವು. ನಮ್ಮ ಮದುವೆ ಟೆನ್ನೆಸಿಯಲ್ಲಿ ನಡೆದಿತ್ತು ಎಂದು ಖರನ್ ಹೇಳಿದರು.
ಖರನ್ ಕೇವಲ 15 ವರ್ಷ ಪ್ರಾಯದವನಾಗಿದ್ದಾಗ ಈ ಜೋಡಿ 2012ರಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಚೆರಿಲ್ ಪುತ್ರ ನಡೆಸುವ ಫಾಸ್ಟ್ ಫುಡ್ ರೆಸ್ಟಾರೆಂಟ್ನಲ್ಲಿ ಇವರು ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಬಹಳ ವರ್ಷಗಳ ಕಾಲ ಇವರ ನಡುವೆ ಸಂಪರ್ಕ ಕಡಿತವಾಗಿತ್ತು. ಬಳಿಕ ಇವರು ಕಳೆದ ವರ್ಷ ನವೆಂಬರ್ 4ರಂದು ಮತ್ತೆ ಒಬ್ಬರನ್ನೊಬ್ಬರು ಭೇಟಿಯಾದರು. ಜುಲೈ 31ರಂದು ಖರನ್ ಉಂಗುರವನ್ನು ನೀಡುವ ಮೂಲಕ ಪ್ರೇಮ ನಿವೇದನೆ ಮಾಡಿದ್ದನು.
ಚೆರಿಲ್ರನ್ನು ವಿವಾಹವಾಗಲು ನನ್ನ ಬಳಿ ಹಲವು ಕಾರಣಗಳಿದ್ದವು. ಆಕೆ ಸುಂದರಿ, ಪ್ರಾಮಾಣಿಕ ಹಾಗೂ ಸಹಾನುಭೂತಿಯುಳ್ಳ ಮಹಿಳೆ ಆಗಿದ್ದಾರೆ. ನಾನು ಪ್ರೇಮ ನಿವೇದನೆ ಮಾಡಿದಾಗ ಚೆರಿಲ್ಗೆ ನಂಬಲು ಸಾಧ್ಯವಾಗಿರಲಿಲ್ಲ. ನನಗೆ ಇದು ಮೊದಲ ಮದುವೆಯಾಗಿದೆ.ಆದರೆ ಚೆರಿಲ್ ಈ ಹಿಂದೆ ಕೂಡ ಮದುವೆ ಆಗಿದ್ದರು ಎಂದು ಹೇಳಿದ್ದಾನೆ.
ಚೆರಿಲ್ರ ಏಳು ಮಕ್ಕಳಲ್ಲಿ ಮೂವರು ಈ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆ. ಖರನ್ ಕುಟುಂಬಸ್ಥರಿಗೆ ಈ ಮದುವೆ ಒಪ್ಪಿಗೆ ಇದೆ ಎನ್ನಲಾಗಿದೆ. ಇದೆಲ್ಲದರ ನಡುವೆ ಈ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಅನೇಕರು ಒಳ್ಳೆಯ ಹೇಳಿಕೆಗಳನ್ನೇ ನೀಡಿದರೆ ಇನ್ನು ಕೆಲವರು ಖರನ್, ಚೆರಿಲ್ರ ಹಣ ದುರ್ಬಳಕೆ ಮಾಡಲು ಪ್ಲಾನ್ ಮಾಡಿದ್ದಾನೆ ಎಂಬೆಲ್ಲ ಮಾತನ್ನು ಹೇಳಿದ್ದಾರೆ.