ನಮ್ಮ ಜನರು ತಮ್ಮ ಅಗತ್ಯತೆಗಳ ಪೂರೈಕೆಗೆ ಯಾವ ಹಂತಕ್ಕಾದರೂ ಹೋಗುತ್ತಾರೆ. ತಮಗೆ ದೇವರು ಕೊಟ್ಟರುವ ಅಲ್ಪಸ್ವಲ್ಪ ಬುದ್ಧಿ ಉಪಯೋಗಿಸಿಕೊಂಡೇ ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ. ಕೆಲವೊಮ್ಮೆ ಸಂಶೋಧನೆಗಳು, ಆವಿಷ್ಕಾರಗಳು ವಿಫಲವಾಗುವುದುಂಟು. ಆದರೆ, ಗಮನವಿಟ್ಟು ಮಾಡಿದ ಹೊಸ ಆವಿಷ್ಕಾರ ಹೊಸ ಕ್ರಾಂತಿಯನ್ನೇ ಸೃಷ್ಟಿಸಿರುವುದು ಚರಿತ್ರೆಯ ಭಾಗವಾಗಿದೆ.
ಅದೇ ರೀತಿ, ಅಡುಗೆ ಮನೆಗಳಲ್ಲಿ, ಕಚೇರಿಗಳಲ್ಲಿ ಬಿಸಿ ಗಾಳಿ ಹೊರಗಿನ ವಾತಾವರಣಕ್ಕೆ ಸಿಲುಕುವಂತೆ ಅಳವಡಿಸಲಾಗುವ ಎಕ್ಸಾಸ್ಟ್ ಫ್ಯಾನ್ ಅನ್ನೇ ಭೂಪನೊಬ್ಬ ಏರ್ ಕೂಲರ್ ಆಗಿ ಪರಿವರ್ತಿಸಿದ್ದಾನೆ !
ಅರಬ್ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಲಿಚ್ಚಿಸುವ ಭಾರತೀಯರಿಗೆ ಇಲ್ಲಿದೆ ಗುಡ್ ನ್ಯೂಸ್..!
ಹೌದು, ಎಕ್ಸಾಸ್ಟ್ ಫ್ಯಾನ್ ತಿರುಗಿದಾಗ ಒಳಗಿನ ಗಾಳಿಯನ್ನು ಕಿಟಕಿ ಅಥವಾ ರಂಧ್ರದ ಮೂಲಕ ಹೊರಗಿನ ವಾತಾವರಣಕ್ಕೆ ದಬ್ಬುತ್ತದೆ. ಅದನ್ನೇ ಉಲ್ಟಾ ಮಾಡಿ ಚಾಲೂ ಮಾಡಿದರೆ ಎಕ್ಸಾಸ್ಟ್ ಫ್ಯಾನ್‌ನಿಂದಲೇ ತಣ್ಣನೆಯ ಗಾಳಿ ಬರುತ್ತದೆ. ಇದು ಹಲವರಿಗೆ ಗೊತ್ತಿರುವ ವಿಷಯವಾದರೂ, ಸೆಕೆ ತಾಳಲಾರದೆಯೇ ಬಯಲಿನಲ್ಲಿ ಇಂಥ ಕೂಲರ್ ತಯಾರಿಸಿಟ್ಟುಕೊಂಡವರು ವಿರಳ.
ಇಂಥ ಪ್ರಯೋಗ ನಡೆದಿರುವ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಎಕ್ಸಾಸ್ಟ್ ಫ್ಯಾನ್ ಅನ್ನು ಎರಡು ಬಿದಿರಿನ ಕೋಲುಗಳಿಗೆ ಗಟ್ಟಿಯಾಗಿ ಕಟ್ಟಲಾಗಿದೆ. ಮೇಲೆ ಕೆಳಗೆ ಕೂಡ ಫ್ಯಾನ್ ತಿರುಗುವ ವೇಗಕ್ಕೆ ಆಧಾರವಾಗಿ ಕಬ್ಬಿಣದ ಸರಕುಗಳನ್ನು ಇರಿಸಲಾಗಿದೆ. ವೈರ್‌ಗಳನ್ನು ಜೋಡಿಸಿ, ಸಮೀಪದ ಎಲೆಕ್ಟ್ರಿಕ್ ಸಾಕೆಟ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ನೋಡಿ ಇದನ್ನೇ ’ದೇಸಿ ಜುಗಾಡ್’ ಎನ್ನುತ್ತಾರೆ !
https://twitter.com/bhandaraic/status/1307554988944584705?ref_src=twsrc%5Etfw%7Ctwcamp%5Etweetembed%7Ctwterm%5E1307554988944584705%7Ctwgr%5E%7Ctwcon%5Es1_&ref_url=h