alex Certify ಸಾಂಕ್ರಾಮಿಕದ ಸಂದರ್ಭದಲ್ಲಿ ʼಉದ್ಯೋಗʼ ಕಳೆದುಕೊಂಡವರಿಗೆ ESIC ನಿಂದ ಗುಡ್​ ನ್ಯೂಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಂಕ್ರಾಮಿಕದ ಸಂದರ್ಭದಲ್ಲಿ ʼಉದ್ಯೋಗʼ ಕಳೆದುಕೊಂಡವರಿಗೆ ESIC ನಿಂದ ಗುಡ್​ ನ್ಯೂಸ್​

ಕೊರೊನಾ ಸಾಂಕ್ರಾಮಿಕದ ನಡುವೆಯೇ ಉದ್ಯೋಗ ಕಳೆದುಕೊಂಡ ಕೈಗಾರಿಕಾ ವಲಯದ ಕಾರ್ಮಿಕರಿಗೆ ನಿರುದ್ಯೋಗ ಸೌಲಭ್ಯಗಳನ್ನು ಇನ್ನೂ ಒಂದು ವರ್ಷ ಮುಂದುವರಿಸೋದಾಗಿ ಉದ್ಯೋಗಿಗಳ ರಾಜ್ಯ ವಿಮಾ ನಿಗಮವು ಘೋಷಣೆ ಮಾಡಿದೆ.

ಈ ವರ್ಷದ ಜೂನ್​ 30ರವರೆಗೆ ಏಜನ್ಸಿ ಸೌಕರ್ಯಗಳನ್ನು ನೀಡಲಿದೆ ಎಂದು ಇಸಿಐಸಿ ಈ ಮೊದಲು ಘೋಷಣೆ ಮಾಡಿತ್ತು. ಇದೀಗ ಈ ಅವಧಿಯನ್ನು ಮುಂದಿನ ವರ್ಷ ಜೂನ್​ 30ರವರೆಗೆ ವಿಸ್ತರಿಸಿದೆ. ಇಎಸ್​​ಐಸಿ ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಕಾರ್ಮಿಕರಿಗೆ ಹಣಕಾಸಿನ ನೆರವನ್ನು ನೀಡುತ್ತದೆ.

ಇಎಸ್​ಐಸಿ ಬೋರ್ಡ್ ಮೀಟಿಂಗ್​ನಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದರಿಂದ ಉದ್ಯೋಗ ಕಳೆದುಕೊಂಡ ಇಎಸ್​​ಐಸಿ ಚಂದಾದಾರರಿಗೆ ಲಾಭವಾಗಲಿದೆ ಎಂದು ಇಎಸ್​ಐಸಿ ಮಂಡಳಿ ಸದಸ್ಯ ಅಮರ್​ಜೀತ್​ ಕೌರ್​ ಹೇಳಿದ್ದಾರೆ.

ಸಾಂಕ್ರಾಮಿಕದ ಸಂದರ್ಭದಲ್ಲಿ ಕೆಲಸ ಕಳೆದುಕೊಂಡ ಇಎಸ್​ಐಸಿ ಚಂದಾದಾರು ಕೆಲ ನಿಬಂಧನೆಗಳ ಅಡಿಯಲ್ಲಿ ಮೂರು ತಿಂಗಳ ಸಂಬಳದಲ್ಲಿ 50 ಪ್ರತಿಶತ ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಾರೆ ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವ ಭೂಪೇಂದ್ರ ಯಾದವ್​ ಹೇಳಿದರು.

ಇಎಸ್​ಐಸಿ ವಿಮೆ ಮಾಡಿಸಿಕೊಂಡ ಅರ್ಹ ಕಾರ್ಮಿಕರು ಇಎಸ್​ಐಸಿ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು. ಆದರೆ ಇದಕ್ಕಾಗಿ ಅವರು ಹಳೆಯ ಸಂಸ್ಥೆಗೆ ಭೇಟಿ ನೀಡಬೇಕೆಂಬ ನಿಯಮವಿಲ್ಲ. ಅರ್ಹ ಚಂದಾದಾರರಿಗೆ ಹಣವು ಬ್ಯಾಂಕ್​ ಖಾತೆಗೆ ಜಮೆ ಆಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...