ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಹಲವರನ್ನು ವಿಚಾರಣೆಯಷ್ಟೇ ಮಾಡಿ ಬಿಡಲಾಗಿದೆ. ಕೂದಲು ಟೆಸ್ಟ್ ಮಾಡದೇ ಪೊಲೀಸರು ಆರೋಪಿಗಳನ್ನು ಬಿಡುತ್ತಿರುವುದು ಯಾಕೆ? ರಾಜಕಾರಣಿಗಳ ಒತ್ತಡಕ್ಕೆ ಸಿಸಿಬಿ ಪೊಲೀಸರು ಮಣಿಯಲು ಕಾರಣವೇನು? ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ರೀತಿಯಲ್ಲಿ ವರ್ತಿಸಬಾರದು. ಎಲ್ಲಾ ಆರೋಪಿಗಳನ್ನು ಸೂಕ್ತವಾಗಿ ವಿಚಾರಣೆ ಮಾಡಬೇಕು. ಕೇವಲ ಯೂರಿನ್, ಬ್ಲಡ್ ಟೆಸ್ಟ್ ಮಾಡುವ ಬದಲು ಕೂದಲು ಟೆಸ್ಟ್ ಮಾಡಬೇಕು. ಕೂದಲಿನಲ್ಲಿ ಒಂದು ವರ್ಷದವರೆಗಿನ ಮಾಹಿತಿ ಲಭ್ಯವಾಗುತ್ತೆ. ಆರೋಪಿಗಳು ಡ್ರಗ್ಸ್ ಸೇವಿಸಿದ್ದರೆ ಕೂದಲು ಟೆಸ್ಟ್ ನಲ್ಲೇ ಗೊತ್ತಾಗುತ್ತೆ. ಆದರೆ ಬಂಧಿತ ಆರೋಪಿಯೇ ಹೆಸರು ಹೇಳಿದ್ದರೂ ಕೂಡ ಸಿಸಿಬಿ ಪೊಲೀಸರು ಟೆಸ್ಟ್ ಮಾಡದೇ ಬಿಡುತ್ತಿದ್ದಾರೆ ಎಂದು ಪರೋಕ್ಷವಾಗಿ ಅನುಶ್ರೀ ಕೇಸ್ ವಿಚಾರವಾಗಿ ಹೇಳಿದ್ದಾರೆ.
ಮಹಿಳೆಯರ 700 ಕ್ಕೂ ಅಧಿಕ ಒಳ ಉಡುಪು ಕದ್ದ ಕಳ್ಳ ಅರೆಸ್ಟ್
ನಾನು ವೈಯಕ್ತಿಕವಾಗಿ ಯಾರ ವಿರುದ್ಧ ಮಾತನಾಡುತ್ತಿಲ್ಲ. ಅರೆಸ್ಟ್ ಆಗಿ ಬಿಡುಗಡೆಯಾದವರು ಮತ್ತೆ ಡ್ರಗ್ಸ್ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಹಲವು ರಾಜಕಾರಣಿಗಳ ಮಕ್ಕಳು, ನಟ-ನಟಿಯರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಡ್ರಗ್ಸ್ ಮಾಫಿಯಾ ಹಿಂದೆ ಬೃಹತ್ ಜಾಲವೇ ಇದೆ. ಹೊರ ದೇಶ, ರಾಜ್ಯಗಳಿಂದಲೂ ಬೆಂಗಳೂರಿಗೆ ಕೋಟ್ಯಂತರ ರೂಪಾಯಿ ಡ್ರಗ್ಸ್ ಬರುತ್ತಿದೆ. ಆದರೆ ಪೊಲೀಸರು ಒತ್ತಡದಿಂದಾಗಿ ಸೂಕ್ತವಾಗಿ ವಿಚಾರಣೆ ನಡೆಸುತ್ತಿಲ್ಲ. ಸಮಾಜದ ಕಳಕಳಿಗಾಗಿಯಾದರೂ ತನಿಖೆ ನಡೆಸಲಿ. ಇಂದಿನ ಯುವ ಪೀಳಿಗೆ ಭವಿಷ್ಯದ ಬಗ್ಗೆ ಎಲ್ಲರೂ ಯೋಚಿಸಬೇಕಾದ ಅಗತ್ಯವಿದೆ.