ನವದೆಹಲಿ: ದೇವಾಲಯಗಳಿಗೆ ಮೀಸಲಾದ ಆಸ್ತಿಯ ಒಡೆತನ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ದೇವಾಲಯದ ಭೂಮಿಗೆ ದೇವರೇ ಮಾಲೀಕ ಎಂದು ತಿಳಿಸಿದೆ.
ಯಾವುದೇ ದೇವಾಲಯಗಳ ಆಸ್ತಿಗೆ ಅರ್ಚಕರು ಒಡೆಯರಲ್ಲ, ದೇವರೇ ನಿಜವಾದ ಮಾಲೀಕ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ದೇವಾಲಯಗಳಿಗೆ ಮೀಸಲಾದ ಭೂದಾಖಲೆಗಳಲ್ಲಿ ಅರ್ಚಕರ ಹೆಸರನ್ನು ಸೇರ್ಪಡೆ ಮಾಡಬೇಕೆಂಬುದರ ಕುರಿತಾಗಿ ಉಂಟಾದ ಗೊಂದಲದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ, ದೇಗುಲದ ಭೂಮಿಗೆ ದೇವರೇ ಮಾಲೀಕರಾಗಿದ್ದು, ತಾತ್ಕಾಲಿಕವಾಗಿ ಒಡೆತನ ಹೊಂದಿ ಆಸ್ತಿಯ ನಿರ್ವಹಣೆ ಮಾಡಬಹುದು ಎಂದು ಹೇಳಲಾಗಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆದಿದ್ದು, ಅರ್ಚಕರು, ಪುರೋಹಿತರು, ಪೂಜಾರಿ ತಾತ್ಕಾಲಿಕವಾಗಿ ದೇವಾಲಯದ ಆಸ್ತಿ ನಿರ್ವಹಣೆ ಮಾಡಬಹುದು. ಆದರೆ, ಅವರು ಯಾವುದೇ ದೇವಾಲಯದ ಆಸ್ತಿಗೆ ಮಾಲೀಕರಲ್ಲ, ದೇವರೇ ಮಾಲೀಕ ಎಂದು ಹೇಳಿದೆ.