ಚೀನಾ ಕಂಪನಿ ಆದರೂ ಕೂಡ ಸ್ಮಾರ್ಟ್ಫೋನ್ ಮತ್ತು ಸಾಧನಗಳ ಗುಣಮಟ್ಟದಲ್ಲಿ ಭಾರತೀಯರ ಮನಗೆದ್ದಿರುವ ರಿಯಲ್ ಮಿ ಕಂಪನಿಯು ಹೊಸ ಟ್ಯಾಬ್ಲೆಟ್ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ಮುಗಿಸಿದೆ. ಸೆ. 9ರಂದು 10.4 ಇಂಚಿನ, 2000 * 1200 ಪಿಕ್ಸಲ್ಗಳಷ್ಟು ರೆಸಲ್ಯೂಷನ್ಗಳ ರಿಯಲ್ ಮಿ ಪ್ಯಾಡ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ.
ಭಾರತಕ್ಕೆ ಬಂತು ಎಲೆಕ್ಟ್ರಿಕ್ ಟೂತ್ ಬ್ರಷ್
ಆಪಲ್ನ ಐಪ್ಯಾಡ್ ಏರ್ನಿಂದ ಸ್ಫೂರ್ತಿ ಪಡೆದು 7100 ಎಂಎಎಚ್ ಸಾಮರ್ಥ್ಯದ ಬ್ಯಾಟರಿ, ಒಟ್ಟಾರೆ ವಿನ್ಯಾಸವನ್ನು ರೂಪಿಸಲಾಗಿದೆ. ಈ ರಿಯಲ್ ಮಿ ಪ್ಯಾಡ್ನ ದಪ್ಪ ಕೇವಲ 6.9 ಮಿ.ಮೀ ಮಾತ್ರವಂತೆ.
4ಜಿ ರ್ಯಾಮ್, 2ಗಿಗಾ ಹರ್ಟ್ಜ್ ಡುಯಲ್ ಕೋರ್ ಪ್ರೊಸೆಸರ್, ಹಿಂಬದಿ-ಮುಂಬದಿಯಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮೆರಾಗಳನ್ನು ಟ್ಯಾಬ್ಲೆಟ್ ಹೊಂದಿದೆ. ಕಂಪನಿಯ ಮೂಲಗಳ ಪ್ರಕಾರ ಟ್ಯಾಬ್ಲೆಟ್ನ ಬೆಲೆ 22,999 ರೂ.ಗೆ ನಿಗದಿಯಾಗುವ ಸಾಧ್ಯತೆ ಹೆಚ್ಚಿದೆ.
ಇದರೊಂದಿಗೆ ರಿಯಲ್ ಮಿ ಕಂಪನಿಯು 8ಎಸ್ ಸ್ಮಾರ್ಟ್ಫೋನ್ ಕೂಡ ಬಿಡುಗಡೆ ಮಾಡಲಿದೆ.