ಕೊಪ್ಪಳ: ಇನ್ಮುಂದೆ ಕೊಪ್ಪಳ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಲು ಬಯಸುವ ಅಧಿಕಾರಿಗಳು ಹಾಗೂ ಸಂದರ್ಶಕರು, ಕೋವಿಡ್-19 ಲಸಿಕೆ ಪಡೆದ ಪ್ರಮಾಣ ಪತ್ರ ನೀಡುವುದನ್ನು ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.
ಜಿಲ್ಲಾಡಳಿತವು ಈ ತೀರ್ಮಾನಕ್ಕೆ ಬಂದಿದ್ದು, ಅಧಿಕಾರಿಗಳು ಹಾಗೂ ಸಂದರ್ಶಕರು ಆಯುಕ್ತರನ್ನು ಭೇಟಿ ಮಾಡಲು ಬಯಸಿದರೆ ಕೊರೋನಾ ಲಸಿಕೆಯ ಪ್ರಮಾಣ ಪತ್ರ ತೋರಿಸಬೇಕಾಗುತ್ತದೆ.
ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳು ಸೇರಿದಂತೆ ದಿನಂಪ್ರತಿ ಸಾವಿರಾರು ಜನ ಪ್ರತಿದಿನ ಅವರ ಕಚೇರಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಡಿಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.
ವಿಮಾನ ಹಾರಾಟಕ್ಕೆ ತೊಂದರೆ: ಈ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಶುರುವಾಗಿದೆ ಕಟ್ಟಡ ತೆರವಿನ ಭೀತಿ
ಕೊರೋನಾ 3ನೇ ಅಲೆ ಭೀತಿ ಇರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಅಧಿಕಾರಿಗಳು ಲಸಿಕೆ ಹಾಕಲು ಷರತ್ತುಗಳನ್ನು ವಿಧಿಸುವ ಬದಲು ಲಸಿಕೆ ಹಾಕುವುದು ಮತ್ತು ಲಸಿಕೆಯ ಬಗ್ಗೆ ಜನರನ್ನು ಪ್ರೇರೇಪಿಸಬೇಕು ಎಂದು ಈ ಹಿಂದೆ ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೇಳಿದ್ದರು.