alex Certify ಉಚಿತ ವೈಫೈ ದುರುಪಯೋಗ ತಡೆಯಲು ಇದೊಂದು ಸಖತ್‌ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ವೈಫೈ ದುರುಪಯೋಗ ತಡೆಯಲು ಇದೊಂದು ಸಖತ್‌ ಪ್ಲಾನ್

ಕೆಫೆ ಹಾಗೂ ರೆಸ್ಟೋರೆಂಟ್​ಗಳಲ್ಲಿ ಉಚಿತ ವೈಫೈ ಸೇವೆಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಇದು ಒಳ್ಳೆಯ ಮಾರ್ಕೆಟಿಂಗ್​ ಪ್ಲಾನ್​ ಕೂಡ ಹೌದು. ಒಳ್ಳೆಯ ಖಾದ್ಯವನ್ನು ಸೇವಿಸುತ್ತ ಇಂಟರ್ನೆಟ್​ನಲ್ಲಿ ರೌಂಡ್​ ಹಾಕೋಕೆ ಬಹುತೇಕರು ಮನಸ್ಸು ಮಾಡ್ತಾರೆ.

ಈ ರೀತಿ ವೈಫೈ ಸೇವೆಗಳನ್ನು ಮುಕ್ತವಾಗಿ ನೀಡುವ ವೇಳೆಯಲ್ಲಿ ಪಾಸ್​ವರ್ಡ್​ಗಳನ್ನು ತುಂಬಾ ಸರಳವಾಗಿ ಇಡಲಾಗುತ್ತದೆ. ಇದರಿಂದ ಗ್ರಾಹಕರಿಗೂ ವೈಫೈ ಸೇವೆಯನ್ನು ಬಳಸಿಕೊಳ್ಳುವುದು ಸುಲಭ ಎನಿಸುತ್ತದೆ.

ಆದರೆ ಅನೇಕರು ಈ ಉಚಿತ ವೈಫೈ ಸೌಲಭ್ಯ ಹೊಂದಿರುವ ರೆಸ್ಟೋರೆಂಟ್​ಗಳ ಮುಂದೆ ಸುಮ್ಮನೇ ಕೂತು ಈ ಉಚಿತ ಸೌಲಭ್ಯದ ಲಾಭವನ್ನು ಪಡೆದುಬಿಡ್ತಾರೆ. ರೆಸ್ಟೋರೆಂಟ್ ​ಗಳಲ್ಲಿ ಏನನ್ನು ಆರ್ಡರ್​ ಮಾಡದೇ ಉಚಿತವಾಗಿ ಲಾಭ ಪಡೆದರೆ ಇದರಿಂದ ರೆಸ್ಟೋರೆಂಟ್​ ಗೂ ನಷ್ಟ. ಇದು ಖಂಡಿತವಾಗಿಯೂ ರೆಸ್ಟೋರೆಂಟ್​ ಮಾಲೀಕನ ಕೋಪಕ್ಕೆ ಕಾರಣವಾಗುವ ವಿಷಯವಾಗಿದೆ.

ಆದರೆ ಇಲ್ಲೊಂದು ಕೆಫೆ ಮಾತ್ರ ಈ ಸಮಸ್ಯೆಗೆ ಒಂದೊಳ್ಳೆ ಪರಿಹಾರವನ್ನು ಹುಡುಕಿರುವಂತೆ ಕಾಣುತ್ತಿದೆ. ಕಷ್ಟದ ಪಾಸ್​ವರ್ಡ್​ಗಳನ್ನು ಇಡುವ ಬದಲು ಟೆಕ್ಸಾಸ್​ನ ಸ್ಯಾನ್​ ಆ್ಯಂಟನಿಯೋದಲ್ಲಿರುವ ಯಾಯಾಸ್​ ಥಾಯ್​ ಒಂದು ಗಣಿತದ ಪ್ರಶ್ನೆಯೊಂದನ್ನು ಪಾಸ್​ವರ್ಡ್​ ಆಗಿ ಇಟ್ಟಿದೆ. ಈ ಗಣಿತದ ಸಮಸ್ಯೆಯನ್ನು ಬಿಡಿಸಿ ಸರಿಯಾದ ಉತ್ತರ ಹುಡುಕುವವರು ಮಾತ್ರ ವೈಫೈ ಪಾಸ್​ವರ್ಡ್​ ಅನ್ನು ಕಂಡುಕೊಳ್ಳಬಹುದಾಗಿದೆ.

ಈ ಐಡಿಯಾವು 2016ರಿಂದಲೇ ಜಾರಿಯಲ್ಲಿದೆ. ಆದರೆ ರೆಡಿಟ್​ನಲ್ಲಿ ಬಳಕೆದಾರರು ವಿಡಿಯೋವೊಂದು ಶೇರ್ ಮಾಡಿದ ಬಳಿಕ ಈ ವಿಚಾರ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಅಂದಹಾಗೆ ಈ ಗಣಿತದ ಸಮಸ್ಯೆಯನ್ನು ಬಿಡಿಸುವುದು ಕೂಡ ಅಷ್ಟೇನು ಸುಲಭವಾಗಿ ಇಲ್ವಂತೆ..!

— OddStuffMagazine (@OddStuffMag) October 27, 2016

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...