ಭವಿಷ್ಯದ ಆರ್ಥಿಕ ಸುರಕ್ಷತೆಗಾಗಿ ಹೂಡಿಕೆಯ ಉತ್ತಮ ಆಯ್ಕೆಗಳಲ್ಲಿ ಒಂದಾದ ಎಲ್‌ಐಸಿಯ ಜೀವನ್ ಆನಂದ್ ಇದೀಗ ಎರಡು ಭಿನ್ನ ಮಧ್ಯಂತರಗಳಲ್ಲಿ ಎರಡು ಬೋನಸ್ ನೀಡುವ ಸ್ಕೀಂ ಒಂದನ್ನು ಪರಿಚಯಿಸಿದೆ.
ಈ ಸ್ಕೀಂನಲ್ಲಿ ಪಾಲಿಸಿ ಮೆಚ್ಯೂರ್ ಆಗುವವರೆಗೂ ಪ್ರೀಮಿಯಂ ಕಟ್ಟಬೇಕಿದ್ದು, ನಿರಂತರ 15 ವರ್ಷಗಳ ಕಾಲ ಹೂಡಿಕೆ ಮಾಡುವ ಪಾಲಿಸಿದಾರರಿಗೆ ವಿಶೇಷ ಬೋನಸ್ ಸಿಗಲಿದೆ.
ಹೂಡಿಕೆದಾರರ ಸಾವಿನಂಥ ಪ್ರಕರಣದಲ್ಲಿ ಜೀವನ್ ಆನಂದ್ ಪಾಲಿಸಿಯು ನಾಮಿನಿಗಳಿಗೆ ಉತ್ತಮ ಮೊತ್ತವನ್ನು ರಿಟರ್ನ್ಸ್ ರೂಪದಲ್ಲಿ ಕೊಡುವ ಮೂಲಕ ಅವರ ಭವಿಷ್ಯಕ್ಕೊಂದು ಬುನಾದಿ ಕೊಡಲಿದೆ. ಈ ಸ್ಕೀಂನಲ್ಲಿ ಸಿಗಬಹುದಾದ ಕನಿಷ್ಠ ಮೊತ್ತ ಒಂದು ಲಕ್ಷ ರೂಪಾಯಿಯಾಗಿದೆ.
ಖಾತ್ರಿ ಪಡಿಸಲಾದ ಮೊತ್ತದ ಶೇ.125ರಷ್ಟನ್ನು ಹೂಡಿಕೆದಾರರ ಮರಣದ ಸಂದರ್ಭದಲ್ಲಿ ನಾಮಿನಿಗೆ ಎಲ್‌ಐಸಿ ಆಫರ್ ಮಾಡುತ್ತಿದೆ. ಆಕಸ್ಮಿಕ ಸಾವು, ಅಂಗಾಂಗ ವೈಫಲ್ಯತೆ, ಅವಧಿ ಖಾತ್ರಿ ಹಾಗೂ ಇತರೆ ಗಂಭೀರ ಕಾಯಿಲೆಗಳನ್ನು ಸಹ ಎಲ್‌ಐಸಿಯ ಜೀವನ್ ಆನಂದ್ ಪಾಲಿಸಿಯ ಪ್ರಯೋಜನಗಳಲ್ಲಿ ಒಳಗೊಂಡಿವೆ.
ಹೂಡಿಕೆದಾರರು ತಮ್ಮ ರಿಟರ್ನ್ಸ್ ಹೇಗೆ ಬರಬೇಕೆಂದು ಆಯ್ದುಕೊಳ್ಳಬಹುದಾಗಿದೆ. ಒಂದೇ ಬಾರಿಗೆ ದೊಡ್ಡ ಮೊತ್ತವನ್ನು ಹಿಂಪಡೆಯಲು ಹೂಡಿಕೆದಾರರು ಆಯ್ದುಕೊಳ್ಳಬಹುದು ಅಥವಾ ಮಾಸಿಕ ರಿಟರ್ನ್ಸ್ ರೂಪದಲ್ಲೂ ಸಹ ಹೂಡಿಕೆದಾರರು ರಿಟರ್ನ್ಸ್ ಪಡೆಯಬಹುದಾಗಿದೆ.
ಪ್ರತಿನಿತ್ಯ 76 ರೂ.ಗಳ ಹೂಡಿಕೆಯೊಂದಿಗೆ ಮೆಚ್ಯೂರಿಟಿ ವೇಳೆ 10.33 ಲಕ್ಷ ರೂಪಾಯಿ ನಿಮ್ಮ ಜೇಬಿಗಿಳಿಸಿಕೊಳ್ಳಲು ಇಲ್ಲಿದೆ ನೋಡಿ ಒಂದು ಪ್ಲಾನ್:
24 ವರ್ಷದಷ್ಟು ವಯಸ್ಸಿನ ಹೂಡಿಕೆದಾರರು ಎಲ್‌ಐಸಿಯ ಜೀವನ್ ಆನಂದ್ ಪಾಲಿಸಿಯಲ್ಲಿ ಐದು ಲಕ್ಷ ರೂಪಾಯಿಯ ಆಯ್ಕೆ ಮಾಡಿಕೊಂಡರೆ, ಅವರು ಪ್ರತಿ ವರ್ಷ 26,815 ರೂಪಾಯಿಗಳನ್ನು ಪ್ರೀಮಿಯಂ ಕಟ್ಟಬೇಕು. ಇದು ತಿಂಗಳಿಗೆ 2,281 ರೂ. ಅಥವಾ ಪ್ರತಿನಿತ್ಯ 76 ರೂ.ಗಳ ಲೆಕ್ಕಕ್ಕೆ ಬರುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ….! ಹೆಚ್ಚಾಗ್ತಿದೆ ಸಂಬಳ
ಮುಂದಿನ 21 ವರ್ಷಗಳಲ್ಲಿ ಹೂಡಿಕೆ ಮಾಡಲಾದ ದುಡ್ಡು 5,63,705 ರೂಪಾಯಿಯಾಗಿ ಬೆಳೆಯುವುದಲ್ಲದೇ ಬೋನಸ್ ದುಡ್ಡೂ ಸೇರಿ ಒಟ್ಟಾರೆ 10,33,000 ರೂ.ಗಳು ಮೆಚ್ಯೂರಿಟಿ ಅವಧಿಯಲ್ಲಿ ಸಿಗಲಿದೆ.