alex Certify BIG NEWS: ಅಪ್ಘನ್​ ಸರ್ಕಾರದ ಇ ಮೇಲ್​ ಖಾತೆಗಳನ್ನು ಲಾಕ್​ ಮಾಡಿದ ಗೂಗಲ್​ ಸಂಸ್ಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಪ್ಘನ್​ ಸರ್ಕಾರದ ಇ ಮೇಲ್​ ಖಾತೆಗಳನ್ನು ಲಾಕ್​ ಮಾಡಿದ ಗೂಗಲ್​ ಸಂಸ್ಥೆ

ಅಪ್ಘಾನಿಸ್ತಾನದ ಮಾಜಿ ಅಧಿಕಾರಿಗಳ ಇಮೇಲ್​​ಗಳನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಗೂಗಲ್​ ಸಂಸ್ಥೆಯು ಅಪ್ಘನ್​ ಸರ್ಕಾರದ ಕೆಲವು ಇ ಮೇಲ್​​ ಖಾತೆಗಳನ್ನು ತಾತ್ಕಾಲಿಕವಾಗಿ ಲಾಕ್​ ಮಾಡಿದೆ.

ಕೆಲವೊಂದು ಖಾತೆಗಳ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಶುಕ್ರವಾರ ಗೂಗಲ್​ ಸಂಸ್ಥೆ ಮಾಹಿತಿ ನೀಡಿದೆ. ಆದರೆ ಶಾಶ್ವತವಾಗಿ ಇಮೇಲ್​ ಖಾತೆಗಳನ್ನು ಲಾಕ್​​ ಮಾಡೋದ್ರ ಬಗ್ಗೆ ಗೂಗಲ್​ ಯಾವುದೇ ಮಾಹಿತಿ ನೀಡಿಲ್ಲ.

ತಜ್ಞರ ಸಹಾಯದಿಂದ ನಾವು ಅಪ್ಘಾನಿಸ್ತಾನದ ಪರಿಸ್ಥಿತಿಯ ಮೇಲೆ ಸದಾ ಕಣ್ಣಿಡುತ್ತಿದ್ದೇವೆ. ಕೆಲವೊಂದು ಖಾತೆಗಳನ್ನು ರಕ್ಷಿಸುವ ದೃಷ್ಟಿಯಿಂದಾಗಿ ನಾವು ಕೆಲ ತಾತ್ಕಾಲಿಕ ಕ್ರಮ ಕೈಗೊಂಡಿದ್ದೇವೆ ಎಂದು ಗೂಗಲ್​ ವಕ್ತಾರ ಹೇಳಿಕೆ ನೀಡಿದ್ದಾರೆ.

2 ಡಜನ್​ಗೂ ಅಧಿಕ ಅಧಿಕಾರಿಗಳು, ಹಣಕಾಸು, ಕೈಗಾರಿಕೆ, ಉನ್ನತ ಶಿಕ್ಷಣ, ಗಣಿ ಇಲಾಖೆ ಸಚಿವಾಲಯಗಳಲ್ಲಿ ಅಧಿಕೃತ ಸಂವಹನಕ್ಕೆ ಗೂಗಲ್​ನ್ನು ಬಳಸಲಾಗಿದೆ. ತಾಲಿಬಾನಿಗಳು ಜುಲೈ ತಿಂಗಳಲ್ಲಿ ಸಚಿವಾಲಯದ ಮಾಹಿತಿಯನ್ನು ಸೇವ್​​ ಮಾಡಿಡುವಂತೆ ಹೇಳಿದ್ದರು ಎಂದು ಹಿಂದಿನ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಾನು ಈ ರೀತಿ ಮಾಡಿದ್ದರೆ ಅವರಿಗೆ ಹಿಂದಿನ ಸರ್ಕಾರದಲ್ಲಿ ನಡೆದ ಎಲ್ಲಾ ರಹಸ್ಯ ಮಾಹಿತಿಯನ್ನು ಕಲೆಹಾಕಲು ಆಗುತ್ತಿತ್ತು. ಆದರೆ ನಾನು ತಾಲಿಬಾನಿಗಳ ಮನವಿಗೆ ಸ್ಪಂದಿಸಿಲ್ಲ ಹೀಗಾಗಿ ತಲೆಮರೆಸಿಕೊಂಡಿದ್ದೇನೆ ಎಂದು ಆ ಅಧಿಕಾರಿ ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...