ನಮ್ಮೆಲ್ಲರಿಗೂ ಕುಟುಂಬದ ಕೆಲವೊಂದು ಸದಸ್ಯರು ಭಾರೀ ಇಷ್ಟವಾಗುವುದು ಅತ್ಯಂತ ಸಹಜ. ಅವರನ್ನು ಭೇಟಿ ಮಾಡಿ ಮಾತನಾಡುವುದು ನಮಗೆ ಖುಷಿ ನೀಡುತ್ತದೆ.
ಹೀಗೆ ಆಗುವುದು ಮನುಜರಿಗೆ ಮಾತ್ರವಲ್ಲ. ಸಾಕುಪ್ರಾಣಿಗಳಿಗೂ ಮನೆಯಲ್ಲಿ ಯಾರಾದರೊಬ್ಬರ ಮೇಲೆ ವಿಶೇಷ ಅಕ್ಕರೆ ಬೆಳೆದುಬಿಡುತ್ತದೆ.
ನಿಮ್ಮ ಮನವನ್ನು ಮತ್ತಷ್ಟು ಮುದಗೊಳಿಸುತ್ತೆ ಈ ಸುಂದರ ವಿಡಿಯೋ
ಮನೆಯಲ್ಲಿನ ತನ್ನ ಮೆಚ್ಚಿನ ಮಾನವನನ್ನು ಕಾಣುತ್ತಲೇ ಅತ್ಯುತ್ಸಾಹದ ಚಿಲುಮೆಯಾಗುವ ನಾಯಿಯ ವಿಡಿಯೋವೊಂದು ವೈರಲ್ ಆಗಿದೆ.
ಬೆಂಗಳೂರಿನ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಶೇರ್ ಮಾಡಿದ್ದಾರೆ.