ಸಿಕ್ಕ ಸಿಕ್ಕ ವಿಚಾರಕ್ಕೆಲ್ಲಾ ತನ್ನದೇ ನಿಲುವು ತೆಗೆದುಕೊಳ್ಳಲು ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ಜಿಟಿ) ಯಾವುದೇ ಶಾಸನಾತ್ಮಕ ಅಧಿಕಾರ ಹೊಂದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಯಾವುದೇ ವಿಚಾರದ ಬಗ್ಗೆ ತನ್ನದೇ ವಿವೇಚನೆಯಿಂದ ನಿರ್ಣಯ ಕೈಗೆತ್ತಿಕೊಳ್ಳುವ ಅಧಿಕಾರ ಎನ್ಜಿಟಿಗೆ ಇದೆಯೇ ಇಲ್ಲವೇ ಎಂಬ ಕುರಿತಂತೆ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠದ ಎದುರು ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ತನ್ನ ವಾದ ಮುಂದಿಟ್ಟಿದೆ.
ಪರಿಸರ ಸಂಬಂಧಿ ವಿಚಾರಗಳ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಲೆಂದು ಸ್ಥಾಪಿಸಲಾದ ಪ್ರಾಧಿಕಾರದ ಅಧಿಕಾರ ವ್ಯಾಪ್ತಿಗೂ ಪ್ರಕ್ರಿಯಾತ್ಮಕ ವಿಚಾರಗಳಿಗೂ ಯಾವುದೇ ಸಂಬಂಧವಿಲ್ಲ ಎಂದ ಸಚಿವಾಲಯದ ಪರ ವಕೀಲರಾದ ಐಶ್ವರ್ಯಾ ಭಾಟಿ, ಪ್ರಾಧಿಕಾರದ ಅಧಿಕಾರಗಳು ಸರ್ಕಾರದ ಪ್ರಕ್ರಿಯಾತ್ಮಕ ಆಯಾಮಗಳೊಂದಿಗೆ ತಳುಕು ಹಾಕಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್: ಟೆಲಿಕಾಂ ಕಂಪನಿಗಳಿಗೆ ಬಾಕಿ ಎಜಿಆರ್ ಶುಲ್ಕ ಪಾವತಿಸಲು 10 ವರ್ಷ ನೀಡಿದ ಸುಪ್ರೀಂ
ಪ್ರಾಕೃತಿಕ ನ್ಯಾಯದ ಆಶಯಗಳ ಮೇಲೆ ಕೆಲಸ ಮಾಡಬೇಕಾದ ಎನ್ಜಿಟಿಯ ಕಾನೂನಿನ 19(1) ವಿಧಿಯ ಅನ್ವಯ 1908ರ ನಾಗರಿಕ ಕ್ರಿಯೆಗಳ ಕಾನೂನಿನ ಪ್ರಕ್ರಿಯೆಗಳಲ್ಲಿ ತಲೆ ಹಾಕಲು ಬರುವುದಿಲ್ಲವೆಂದ ವಕೀಲೆ, ಅರಣ್ಯ ಸಂಪತ್ತು ಹಾಗೂ ಇತರ ಸ್ವಾಭಾವಿಕ ಸಂಪತ್ತುಗಳ ರಕ್ಷಣೆಗೆಂದು ಸ್ಥಾಪಿತವಾದ ಎನ್ಜಿಟಿಯು ಪರಿಸರಕ್ಕೆ ಸಂಬಂಧಿಸಿದಂತೆ ಕಾನೂನಾತ್ಮಕ ಹಕ್ಕುಗಳನ್ನು ವಿಧಿಸಲು ಬರುತ್ತದೆ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಘನ ತ್ಯಾಜ್ಯ ನಿರ್ವಹಣೆ ಸಂಬಂಧ ಸ್ವಯಂ ಪ್ರೇರಣೆಯಿಂದ ಪ್ರಕರಣ ಕೈಗೆತ್ತಿಕೊಂಡಿದ್ದ ಎನ್ಜಿಟಿ ಮುನ್ಸಿಪಲ್ ಕಾರ್ಪೋರೇಷನ್ಗೆ ಐದು ಕೋಟಿ ರೂಪಾಯಿ ದಂಡ ವಿಧಿಸಿತ್ತು.
ಅದಾಗಲೇ ಘನ ತ್ಯಾಜ್ಯದ ವಿಚಾರವು ಬಾಂಬೆ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ವೇಳೆ ಎನ್ಜಿಟಿ ಪ್ರಕರಣವನ್ನು ತನ್ನ ಕೈಗೆತ್ತಿಕೊಳ್ಳುವುದು ಉಚಿತವಲ್ಲ ಎಂದು ಸುಪ್ರೀಂ ಕೋರ್ಟ್ಗೆ ಇದಕ್ಕೂ ಮುನ್ನ ಮನವರಿಕೆ ಮಾಡಿಕೊಡಲಾಗಿತ್ತು.