ನಿಮ್ಮ ಬಳಿ 786 ಸರಣಿಯ ಭಾರತೀಯ ಕರೆನ್ಸಿ ನೋಟೇನಾದರೂ ಇದ್ದಲ್ಲಿ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ನಿಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶ ಇಲ್ಲಿದೆ.
ಆರ್‌ಬಿಐನಿಂದ ವಿತರಿಸಲಾದ ನೋಟ್ ಒಂದರಲ್ಲಿ ಈ ಸರಣಿ ಇದ್ದಲ್ಲಿ ನೀವು ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಮಾರಿ ಮೂರು ಲಕ್ಷ ರೂಪಾಯಿವರೆಗೂ ಹಣ ಗಳಿಸಬಹುದಾಗಿದೆ.
GOOD NEWS: ಇನ್ಮುಂದೆ ಈ ಕಂಪನಿಗಳೂ ನೀಡಲಿವೆ ಸಾಲ ಸೌಲಭ್ಯ
ನೋಟುಗಳ ಡೀಲಿಂಗ್‌ಗೆಂದೇ ಇರುವ ಪೋರ್ಟಲ್‌ಗಳಲ್ಲಿ ಒಂದಾದ ಇ-ಬೇಯಲ್ಲಿ ನೋಂದಣಿ ಮಾಡಿಕೊಂಡು, ನಿಮ್ಮಲ್ಲಿರುವ ನೋಟಿನ ಚಿತ್ರವನ್ನು ಅಪ್ಲೋಡ್ ಮಾಡಿದರೆ ಆಸಕ್ತ ಮಂದಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಅವರೊಂದಿಗೆ ಕುಳಿತು ರೇಟ್ ಫಿಕ್ಸ್ ಮಾಡಬಹುದಾಗಿದೆ.
5 ರೂ., 10 ರೂ., 20 ರೂ., 50 ರೂ., 100 ರೂ., 200 ರೂ., 500 ರೂ., 2000 ರೂ. ಹೀಗೆ ಯಾವುದೇ ಮುಖಬೆಲೆಯ ನೋಟುಗಳಲ್ಲಿ 786 ಸರಣಿಯ ಸಂಖ್ಯೆ ಇದ್ದಲ್ಲಿ ನಿಮಗೆ ಲಕ್ಷಾಂತರ ರೂಪಾಯಿ ಸಂಪಾದಿಸುವ ಅವಕಾಶ ಸಿಗಲಿದೆ.
ಹಳೆಯ ನೋಟುಗಳ ಮಾರಾಟದ ವೇಳೆ ತಾನು ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲವೆಂದು ತನ್ನ ಪೋರ್ಟಲ್ ಮೂಲಕ ಗ್ರಾಹಕರಿಗೆ ಸ್ಪಷ್ಟಪಡಿಸಿರುವ ರಿಸರ್ವ್ ಬ್ಯಾಂಕ್, ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರಲು ಸೂಚಿಸಿದೆ.