ಹಂತಹಂತವಾಗಿ ಅಂತಾರಾಷ್ಟ್ರೀಯ ಸೇವೆಗಳನ್ನು ಮರುಆರಂಭಿಸುತ್ತಿರುವ ಏರ್ ಇಂಡಿಯಾ, ಇಂದೋರ್ – ದುಬೈ ಮಾರ್ಗದಲ್ಲಿ ತನ್ನ ಕಾರ್ಯಾಚರಣೆಯನ್ನು ಪುನಾರಂಭಿಸಿದೆ.
ಕೋವಿಡ್ ಸಂಕಷ್ಟದಿಂದ 17 ತಿಂಗಳ ಬಳಿಕ ಇಂದೋರ್ – ದುಬೈ ವೈಮಾನಿಕ ಸೇವೆಗೆ ಮರುಚಾಲನೆ ಕೊಟ್ಟಿದೆ ಏರ್ ಇಂಡಿಯಾ. ಜುಲೈ 15, 2019ರಲ್ಲಿ ಆರಂಭಗೊಂಡಿದ್ದ ಈ ಸೇವೆಯು ಮಾರ್ಚ್ 2020ರಲ್ಲಿ ಸ್ಥಗಿತಗೊಂಡಿತ್ತು.
BIG NEWS: ಅಂತರ್ ರಾಜ್ಯ ಪ್ರಯಾಣದ ಬಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ
ಈ ಸಂಬಂಧ ಇಂದೋರ್ನ ದೇವಿ ಅಹಲ್ಯಾಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯಾ ಸಿಂಧಿಯಾ ಹಾಗೂ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಭಾಗಿಯಾಗಿದ್ದರು.