ವಯಸ್ಕರಿಗೆ ಕೋವಿಡ್ 19 ಲಸಿಕೆಯ ಮೊದಲ ಡೋಸ್ನ್ನು ಸಂಪೂರ್ಣವಾಗಿ ವಿತರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ. ರಾಜ್ಯ ಆರೋಗ್ಯ ಇಲಾಖೆಯು ಯಾರಾದರೂ ವಯಸ್ಕರು ಲಸಿಕೆಯ ಮೊದಲ ಡೋಸ್ ಪಡೆಯುವದರಿಂದ ತಪ್ಪಿ ಹೋಗದಂತೆ ನಿಗಾ ವಹಿಸುತ್ತಿದೆ.
ರಸ್ತೆ ಸೌಕರ್ಯವನ್ನೂ ಹೊಂದಿರದ ಗ್ರಾಮವಾದ ಕಾಂಗ್ರಾ ಜಿಲ್ಲೆಯ ಕುಗ್ರಾಮಗಳಲ್ಲಿ ಲಸಿಕಾ ತಂಡವು ಬುಧವಾರ ಹೆಲಿಕಾಪ್ಟರ್ನಲ್ಲಿ ತೆರಳುವ ಮೂಲಕ ಲಸಿಕಾ ಅಭಿಯಾನ ನಡೆಸಿದೆ.
ಬಾರಾ ಭಂಗಾಲ್ ಗ್ರಾಮಕ್ಕೆ ಹೆಲಿಕಾಪ್ಟರ್ನಲ್ಲಿ ಬಂದ ಅಧಿಕಾರಿಗಳು ಬಳಿಕ ಹಿಮಾಲಯ ಪರ್ವತಶ್ರೇಣಿಯ ಬಳಿ ಹಾರಾಟ ನಡೆಸಿದ್ದಾರೆ. ರಸ್ತೆಯ ಸಂಪರ್ಕವನ್ನೂ ಹೊಂದಿರದ ಗ್ರಾಮಗಳನ್ನು ತಲುಪುವುದು ತುಂಬಾನೇ ಕಷ್ಟ. ಹೀಗಾಗಿ ಲಸಿಕಾ ಕ್ಯಾಂಪ್ಗಳನ್ನು ನಡೆಸಲು ಹಿಮಾಚಲ ಪ್ರದೇಶ ಸರ್ಕಾರ ನಮಗೆ ಹೆಲಿಕಾಪ್ಟರ್ ಸೌಲಭ್ಯ ಒದಗಿಸಿದೆ ಎಂದು ಡಿಸಿ ನಿಪುಮ್ ಜಿಂದಾಲ್ ಹೇಳಿದ್ರು.
ಕೆಲ ಸಮಸ್ಯೆಗಳನ್ನು ಹೆಚ್ಚು ಮಾಡುತ್ತೆ ‘ಸೌತೆಕಾಯಿ’
ಬಾರಾ ಬಂಗಾಲ್ ಗ್ರಾಮದಲ್ಲಿ ಒಟ್ಟು 700 ಮಂದಿಯಿದ್ದು ಇದರಲ್ಲಿ 100 ಮಂದಿ ವಯಸ್ಕರಿಗೆ ಈ ತಂಡವು ಲಸಿಕೆಯನ್ನು ನೀಡಿದೆ ಎಂದು ಮುಖ್ಯ ಮೆಡಿಕಲ್ ಆಫೀಸರ್ ಡಾ. ಗುರುದರ್ಶನ್ ಗುಪ್ತಾ ಮಾಹಿತಿ ನೀಡಿದ್ರು.