alex Certify ಕ್ರಿಯಾಶೀಲವಾಗಿ ಟ್ವೀಟ್ ಮಾಡಿ ಮತ್ತೊಮ್ಮೆ ಮುಂಬೈ ನಿವಾಸಿಗಳ ಮನಗೆದ್ದ ಪೊಲೀಸ್ ಇಲಾಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಯಾಶೀಲವಾಗಿ ಟ್ವೀಟ್ ಮಾಡಿ ಮತ್ತೊಮ್ಮೆ ಮುಂಬೈ ನಿವಾಸಿಗಳ ಮನಗೆದ್ದ ಪೊಲೀಸ್ ಇಲಾಖೆ

ಮುಂಬೈ ಮಹಾನಗರ ಪೊಲೀಸರ ಟ್ವೀಟ್ ಖಾತೆಯನ್ನು ಒಮ್ಮೆ ಹೊಕ್ಕರೆ, ಇಷ್ಟಪಡದೆಯೇ ಮರಳಿ ಬಂದವರೇ ಇಲ್ಲ. ಅಷ್ಟು ಕ್ರಿಯಾಶೀಲತೆಯನ್ನು ತುಂಬಿದ ಸಂದೇಶಗಳನ್ನು ನಿವಾಸಿಗರಿಗೆ ಅವರು ಕೊಡುತ್ತಾರೆ.

ಈ ಬಾರಿ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಮಾಸ್ಕ್ ಧರಿಸಿಕೊಂಡು ಎಚ್ಚರಿಕೆ ಕಾಯ್ದುಕೊಳ್ಳುವಂತೆ ಪೊಲೀಸರು ಮಾಡಿರುವ ಕೋಟ್ಸ್ ಮಾದರಿಯ ಟ್ವೀಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿವೆ.

ಆಟೋರಿಕ್ಷಾ ಹಿಂಬರಹದ ಥೀಂ ಬಳಸಿ ಮುಂಬೈ ಪೊಲೀಸರಿಂದ ಕೋವಿಡ್ ಜಾಗೃತಿ

ಮುಂಬೈ ಪ್ಲೀಸ್ ಟೇಕ್ ‘ಖರ್'(ನಗರದ ಪ್ರದೇಶದ ಹೆಸರು) ಮತ್ತು ವ್ಯಾಕ್ಸಿನ್ ‘ಗೇಟ್‍ವೇ’ ಟು ಎ ಸೇಫರ್ ‘ಇಂಡಿಯಾ’ (ಗೇಟ್ ವೇ ಆಫ್ ಇಂಡಿಯಾ ಸ್ಮಾರಕ ಸಂದೇಶದಲ್ಲಿ ಅಡಕವಾಗಿದೆ). ಅದೇ ರೀತಿ, ಮಾಸ್ಕ್ ಈಸ್ ‘ಬೆಸ್ಟ್’ (ಮುಂಬೈ ನಗರ ಸಾರಿಗೆಯ ಈ ಹೆಸರು ಜನರ ನಾಲಿಗೆ ತುದ್ದಿಯಲ್ಲಿದೆ) ಮತ್ತು ಲೆಟ್ಸ್ ಕೀಪ್ ಸೇಫ್ಟಿ ‘ಆ್ಯನ್‍ಟಾಪ್’ (ಪ್ರದೇಶದ ಹೆಸರು) ಆಫ್ ಅವರ್ ಪ್ರಿಯಾರಿಟಿ ಲಿಸ್ಟ್. ಈ ತರಹದ ಕೋಟ್ಸ್ ಗಳನ್ನು ಟ್ವೀಟ್ ಮಾಡಿ, ಅದರಲ್ಲಿ ಕೊರೊನಾ ಮುನ್ನೆಚ್ಚರಿಕೆಯ ಸಂದೇಶವನ್ನು ಸೇರಿಸಿರುವ ಪೊಲೀಸರ ಕ್ರಿಯೇಟಿವಿಟಿಗೆ ಸಲಾಂ ಎನ್ನುತ್ತಿದ್ದಾರೆ ಮುಂಬೈಕರ್ಸ್.

https://twitter.com/MumbaiPolice/status/1432910075656429573?ref_src=twsrc%5Etfw%7Ctwcamp%5Etweetembed%7Ctwterm%5E1432910075656429573%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fcome-sep-mumbai-polices-creative-juices-overflow%2F806425

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...