ಸಂಪತ್ ನಂದಿ ನಿರ್ದೇಶನದ ಗೋಪಿಚಂದ್ ನಟನೆಯ ಬಹುನಿರೀಕ್ಷಿತ ‘ಸೀಟಿಮಾರ್’ ಚಿತ್ರದ ಟ್ರೈಲರ್ ಅನ್ನು ಇಂದು ಆದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು ನೋಡುಗರಿಂದ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ.
ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್….! ಕಡಿಮೆಯಾಗ್ತಿದೆ ಉಳಿತಾಯ ಖಾತೆ ಬಡ್ಡಿ ದರ
ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ ಚಿಟ್ಟೂರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಸೆಪ್ಟೆಂಬರ್ 10ರಂದು ಈ ಸಿನಿಮಾ ತೆರೆ ಮೇಲೆ ಬರಲಿದೆ. ಇದೊಂದು ಸ್ಪೋರ್ಟ್ಸ್ ಹಾಗೂ ಆ್ಯಕ್ಷನ್ ಕಥೆಯನ್ನೊಳಗೊಂಡ ಸಿನಿಮಾ ಎಂದು ಹೇಳಲಾಗಿದೆ. ಭೂಮಿಕ ಚಾವ್ಲಾ, ತರುಣ್ ಅರೋರಾ, ಅಖಿಲ್ ಸಾರ್ಥಕ್, ರಾವ್ ರಮೇಶ್, ಸೇರಿದಂತೆ ಮೊದಲಾದ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ.