ತಾಯ್ನಾಡಿನ ಕಷ್ಟವನ್ನು ಹಾಡಿನ ಮೂಲಕ ಹೊರ ಹಾಕಿದ ಅಫ್ಘನ್ನ ಖ್ಯಾತ ಗಾಯಕ….! ವಿಡಿಯೋ ವೈರಲ್ 30-08-2021 3:51PM IST / No Comments / Posted In: Latest News, Live News, International ತಾಲಿಬಾನ್ ಆಡಳಿತ ಆರಂಭವಾದ ಬಳಿಕ ಅಫ್ಘಾನಿಸ್ತಾನವನ್ನು ತ್ಯಜಿಸಿರುವ ಪ್ರಖ್ಯಾತ ಗಾಯಕ ಶರಾಫತ್ ಪರ್ವಾನಿ ಹಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅಮೆರಿಕದ ಮಿಲಿಟರಿ ಬೇಸ್ ಅಥವಾ ನಿರಾಶ್ರಿತರ ಕ್ಯಾಂಪ್ನಲ್ಲಿ ಚಿತ್ರೀಕರಿಸಿರುವ ಸಾಧ್ಯತೆ ಇದೆ. ಈ ವಿಡಿಯೋವನ್ನು ನ್ಯೂಯಾರ್ಕ್ ಟೈಮ್ಸ್ ವರದಿಗಾರ ಶರೀಫ್ ಹಸನ್ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. 1 ನಿಮಿಷ 50 ಸೆಕೆಂಡ್ ಅವಧಿಯ ವಿಡಿಯೋದಲ್ಲಿ ಶರಾಫತ್ ಪರ್ವಾನಿ ಇತರೆ ದೇಶವಾಸಿಗಳ ಜೊತೆ ಸೇರಿ ತಮ್ಮ ತಾಯ್ನಾಡಿನ ಬಗ್ಗೆ ಹಾಡನ್ನು ಹಾಡಿದ್ದಾರೆ. ನನ್ನ ತಾಯ್ನಾಡಿನ ವೇದನೆಯಿಂದ ಬೇಸತ್ತಿದ್ದೇನೆ, ನನ್ನ ತಾಯ್ನಾಡಿನ ನೋವಿಗೆ ಔಷಧವಿಲ್ಲ ಎಂದ ಸಾಲುಗಳನ್ನು ಗಾಯಕ ಶರಾಫತ್ ಯಾವುದೋ ಮಿಲಿಟರಿ ತಾಣ ಅಥವಾ ಅಮೆರಿಕ ನಿರಾಶ್ರಿತರ ಕ್ಯಾಂಪ್ನಲ್ಲಿ ಹೇಳಿರುವ ಸಾಧ್ಯತೆ ಇದೆ ಎಂದು ಶೀರ್ಷಿಕೆ ನೀಡಲಾಗಿದೆ. ಶರಾಫತ್ ಅಪ್ಘಾನಿಸ್ತಾನದ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಹಾಗೂ ಸಾಗಿತ್ಯ ರಚನೆಕಾರರಾಗಿದ್ದಾರೆ. ಇವರ ಬಳಿ 40 ಸಾವಿರಕ್ಕೂ ಅಧಿಕ ಚಂದಾದಾರರನ್ನು ಹೊಂದಿರುವ ಯುಟ್ಯೂಬ್ ಚಾನೆಲ್ ಕೂಡ ಇದೆ. Your tired of anguish, my homeland Your without song and melody, my homeland Your pained but without medicine, my homeland Sharafat Parwani, a popular singer who was recently evacuated, sings the song somewhere in a military base or refugee camp in the US.#Afghanistan pic.twitter.com/EoIVS7bPmz — Sharif Hassan (@MSharif1990) August 29, 2021