ಆರೋಗ್ಯ ಕಾಪಾಡಿಕೊಂಡವರಿಗೆ ʼಬಂಪರ್ ಗಿಫ್ಟ್ʼ ನೀಡ್ತಿದೆ ಈ ಕಂಪನಿ 30-08-2021 1:55PM IST / No Comments / Posted In: Business, Latest News, Live News ಕೋವಿಡ್ 19ನಿಂದಾಗಿ ಜನರ ಕಚೇರಿ ಕೆಲಸದ ಶೈಲಿಯೇ ಬದಲಾಗಿ ಹೋಗಿದೆ. ಸೋಂಕು ಹರಡುವ ಭೀತಿಯಿಂದ ಅನೇಕ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕೆಲಸವನ್ನು ನೀಡಿವೆ. ಮನೆಯ ನಾಲ್ಕು ಗೋಡೆಯ ನಡುವೆ ಕುಳಿತು ಕೆಲಸ ಮಾಡೋದ್ರಿಂದ ಅನೇಕರು ದೈಹಿಕ ಹಾಗೂ ಮಾನಸಿಕವಾಗಿ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಅನೇಕ ಕಂಪನಿಗಳು ಸಿಬ್ಬಂದಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಎಲ್ಲಾ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುತ್ತಲೇ ಬರ್ತಿದೆ. ಆದರೆ ಝೇರೋಧಾ ಎಂಬ ಹೆಸರಿನ ಕಂಪನಿ ಮಾತ್ರ ಹೊಸ ಪ್ರಯೋಗದ ಮೂಲಕ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ. ಉದ್ಯೋಗಿಗಳಿಗೆ ಆರೋಗ್ಯಕರ ಜೀವನಶೈಲಿಯನ್ನು ರೂಢಿಸುವ ಸಲುವಾಗಿ ಹೊಸ ಆಫರ್ ಒಂದನ್ನು ಸಿಬ್ಬಂದಿಗೆ ನೀಡಲಾಗಿದೆ. ಕಂಪನಿ ಸಿಇಓ ನಿತಿನ್ ಕಾಮತ್ ಟ್ವಿಟರ್ನಲ್ಲಿ ಸಿಬ್ಬಂದಿಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವ ಪ್ಲಾನ್ ಬಗ್ಗೆ ವಿವರಣೆ ನೀಡಿದ್ದಾರೆ. ಕಾಮತ್ ತಮ್ಮ ಸಿಬ್ಬಂದಿಗೆ 12 ತಿಂಗಳ ‘ ಗೆಟ್ ಹೆಲ್ದಿ ಗೋಲ್’ ಎಂಬ ಸವಾಲನ್ನು ಇಟ್ಟಿದ್ದಾರೆ. ಇದರಲ್ಲಿ ಉದ್ಯೋಗಿಗಳು ಪ್ರತಿ ತಿಂಗಳು ತಮ್ಮ ದೇಹದಲ್ಲಾದ ಸುಧಾರಣೆ ಬಗ್ಗೆ ವಿವರಣೆ ನೀಡಬೇಕು. 1 ವರ್ಷದಲ್ಲಿ ಯಾರು ಉತ್ತಮ ಆರೋಗ್ಯ ಕಾಪಾಡಿಕೊಂಡು ತಮ್ಮ ಗುರಿಯನ್ನು ತಲುಪುತ್ತಾರೋ ಆ ಸಿಬ್ಬಂದಿಯು 1 ತಿಂಗಳ ಹೆಚ್ಚುವರಿ ಸಂಬಳ ಹಾಗೂ ಒಬ್ಬರು 10 ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಅವಕಾಶ ಪಡೆಯಲಿದ್ದಾರೆ. ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಮೆಂಟ್ ಸೆಕ್ಷನ್ನಲ್ಲಿ ನೆಟ್ಟಿಗರು ಇದು ನಿಜಕ್ಕೂ ಒಳ್ಳೆ ಐಡಿಯಾ. ಲಾಕ್ಡೌನ್ ನಮಗೆ ಸಂಪತ್ತಿಗಿಂತ ಆರೋಗ್ಯ ಮುಖ್ಯ ಎಂಬುದನ್ನ ಕಲಿಸಿದೆ ಎಂದು ಹೇಳ್ತಿದ್ದಾರೆ. Post the first lockdown, like everywhere, our team @zerodhaonline as a whole was probably the unhealthiest ever, due to the lack of physical activity, work-life imbalance, bad diet, & more. We thought of a way to nudge the team to get healthy and the results are phenomenal. 1/3 — Nithin Kamath (@Nithin0dha) August 28, 2021 On our internal forum(@discourse), we asked everyone to set a 12-month get-healthy goal & update the progress every month, to create accountability. To increase participation, we said everyone who reaches the goal will get a 1-month salary as bonus & 1 lucky draw for Rs 10lks 2/3 — Nithin Kamath (@Nithin0dha) August 28, 2021 The transformation stories are super inspiring & pushing others to take action as well. We also have proof that getting healthy improves professional performance as well. Our Get Healthy program will now run permanently.Sharing to seed the idea among fellow entrepreneurs. 3/3 — Nithin Kamath (@Nithin0dha) August 28, 2021