ಏಷ್ಯಾದಲ್ಲಿ ಏನೇ ಪದಾರ್ಥ ಮಾಡಿದರೂ ಕರ್ರಿ ಮಾತ್ರ ಸ್ಥಾನ ಪಡೆದೇ ಇರುತ್ತದೆ. ಅದರಲ್ಲೂ ಆಗ್ನೇಯ ಏಷ್ಯಾದಲ್ಲಿರುವ ದೇಶಗಳಲ್ಲಿ ಅನೇಕ ವಿಧಧ ಕರ್ರಿ ಪದಾರ್ಥವನ್ನು ಕಾಣಬಹುದಾಗಿದೆ.
ಆದರೆ ಫಿಟ್ನೆಟ್ ಪ್ರಿಯರು ಈ ಕರ್ರಿ ತಿನ್ನಲು ಕೊಂಚ ಹಿಂದೇಟು ಹಾಕುತ್ತಾರೆ. ಏಕೆಂದರೆ ಕರ್ರಿ ಮೇಲೆ ತೇಲುವ ಎಣ್ಣೆಯನ್ನು ನೋಡಿದರೆ ತಿನ್ನಲು ಭಯವಾಗುತ್ತದೆ. ಬಾಯಿಗೆ ರುಚಿಕರ ಆಗಿದ್ದರೂ ಸಹ ಆರೋಗ್ಯದ ದೃಷ್ಟಿಯಿಂದ ಈ ಎಣ್ಣೆ ಭಯ ಹುಟ್ಟಿಸೋದಂತೂ ನಿಜ.
ಇದೇ ಕಾರಣಕ್ಕಾಗಿ ಕರ್ರಿ ಮೇಲಿನ ಎಣ್ಣೆಯನ್ನು ತೆಗೆಯುವ ಹೊಸ ಐಡಿಯಾವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಟ್ವಿಟರ್ನಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗ್ತಿದೆ. ಈ ವಿಡಿಯೋದಲ್ಲಿ ಮಂಜುಗಡ್ಡೆಯ ಸಹಾಯದಿಂದ ಎಣ್ಣೆಯನ್ನು ತೆಗೆಯುತ್ತಿರೋದನ್ನ ಕಾಣಬಹುದಾಗಿದೆ. ಎಣ್ಣೆಯನ್ನು ತೆಗೆಯಲು ಮಂಜುಗಡ್ಡೆ ಬಳಸಲಾಗಿದೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.
https://twitter.com/i/status/1428123395124645898