ಹೆಚ್ಚಿನ ಜನರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅದರಲ್ಲಿ ವಾಟ್ಸಾಪ್ ಕೂಡ ಒಂದು. ಇದರಲ್ಲಿ ಗ್ರೂಪ್ ಸಂದೇಶಗಳಲ್ಲಿ ಬರುವ ಗುಡ್ ಮಾರ್ನಿಂಗ್, ಗುಡ್ ನೈಟ್ ಮುಂತಾದ ಮೆಸೇಜ್ ಕೆಲವರಿಗೆ ಕಿರಿಕಿರಿ ಆಗುವುದಂತೂ ಸುಳ್ಳಲ್ಲ.
ಹಾಗೆಯೇ ಇಲ್ಲೊಬ್ಬ ತನ್ನ ವಾಟ್ಸಾಪ್ ಮೆಸೇಜ್ ನೋಡಿಕೊಳ್ಳಲೆಂದೇ ಸೆಕ್ರಿಟರಿಯನ್ನು ನೇಮಿಸಿದ್ದಾನೆ.
ಹೌದು, ಝೈನ್ ಯಾಕೂಬ್ ಎಂಬಾತ ಇಯಾನ್ ಎಂಬ ವ್ಯಕ್ತಿಯನ್ನು ತನ್ನ ವಾಟ್ಸಾಪ್ ಸೆಕ್ರೆಟರಿಯನ್ನಾಗಿ ನೇಮಿಸಿಕೊಂಡಿದ್ದಾನೆ. ಈತನ ಕೆಲಸವೇನೆಂದರೆ ಬಹಳ ಸರಳವಾಗಿದೆ. ವಾಟ್ಸಾಪ್ ಗ್ರೂಪ್ ನಲ್ಲಿ ಆತ ತನಗೆ ಬರುವ ಮೆಸೇಜ್ ಗಳಿಗೆ ಉತ್ತರಿಸಬೇಕು. ಟಿಕ್ ಟಾಕ್ ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಝೈನ್ ಸಹೋದರ ಜಾಕ್ ಯಾಕೂಬ್ ಸಂದೇಶಗಳನ್ನು ತೋರಿಸಿದ್ದಾರೆ.
ಮದುವೆಯಾಗಲು ಆರು ಅಡಿಗಿಂತ ಕಡಿಮೆ ಎತ್ತರವಿರುವ ವ್ಯಕ್ತಿಯನ್ನು ಸೂಚಿಸಿದ್ದಕ್ಕೆ ಡೇಟಿಂಗ್ ಏಜೆನ್ಸಿ ವಿರುದ್ಧ ಮೊಕದ್ದಮೆ ಹೂಡಿದ ಯುವತಿ..!
ಝೈನ್ ಗೆ ಬಂದಿರುವ ಸಂದೇಶಗಳಿಗೆ ಉತ್ತರಿಸಿರುವ ಇಯಾನ್, “ಕ್ಷಮಿಸಿ, ಇದು ಇಯಾನ್, ನಾನು ನಿಮ್ಮ ಸಂದೇಶವನ್ನು ಓದುತ್ತಿದ್ದೇನೆ. ಅವರು ಪ್ರತಿಕ್ರಿಯಿಸಿದಾಗ ಇದಕ್ಕೆ ಉತ್ತರಿಸುವೆ” ಎಂದು ಬರೆದಿದ್ದಾನೆ.
ಕೆಲವರು ಇದು ಸುಳ್ಳು ಇರಬಹುದು ಅಂದುಕೊಂಡಾಗ ಸ್ವತಃ ಝೈನ್ ತಂದೆ ಸುಳ್ಳಲ್ಲ ನಿಜವೆಂದು ಹೇಳಿದ್ದಾರೆ. ಅಲ್ಲದೆ ಜೂಮ್ ಕರೆಯ ಮುಖಾಂತರ ನಿಜವೆಂದು ತೋರಿಸಿಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದೆ.