alex Certify ವಿದ್ಯಾರ್ಥಿಗಳ ವಾಟ್ಸಾಪ್​ ಗ್ರೂಪ್​ನಲ್ಲಿ ಹರಿದಾಡಿದೆ ಅಶ್ಲೀಲ ವಿಡಿಯೋ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳ ವಾಟ್ಸಾಪ್​ ಗ್ರೂಪ್​ನಲ್ಲಿ ಹರಿದಾಡಿದೆ ಅಶ್ಲೀಲ ವಿಡಿಯೋ..!

ಲಕ್ನೋ ವಿಶ್ವವಿದ್ಯಾಲಯದ ಭಾರತೀಯ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಪದವಿ ಪೂರ್ವ ವಿದ್ಯಾರ್ಥಿಗಳು ರಚಿಸಿದ್ದ ವಾಟ್ಸಾಪ್​ ಗ್ರೂಪಿನಲ್ಲಿ ಅಶ್ಲೀಲ ವಿಡಿಯೋಗಳು ಹರಿದಾಡಿದ್ದು ಇದರಿಂದಾಗಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಈ ಸಂಬಂಧ ವಿಶ್ವವಿದ್ಯಾಲಯದ ಚೀಫ್​ ಪ್ರಾಕ್ಟರ್​​ ಹಸನ್​ಗಂಜ್​ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ. ಈ ಕೃತ್ಯ ಎಸಗಿದ ದುಷ್ಕರ್ಮಿ ಯಾರು ಅನ್ನೋದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಪೇಪರ್​ ಪ್ರೆಸೆಂಟೇಷನ್​ಗಳನ್ನ ಹಂಚಿಕೊಳ್ಳಲು ಉಪನ್ಯಾಸಕರ ಸೂಚನೆಯ ಮೇಲೆಗೆ ಮಹಿಳಾ ವಿದ್ಯಾರ್ಥಿ ಈ ವಾಟ್ಸಾಪ್​ ಗ್ರೂಪ್​​​ ರಚಿಸಿದ್ದರು. ಶನಿವಾರ ತಡರಾತ್ರಿ ಈ ಗ್ರೂಪ್​ನಲ್ಲಿ ಅಶ್ಲೀಲ ಚಿತ್ರ ಹಾಗೂ ಸಂದೇಶಗಳನ್ನ ಪೋಸ್ಟ್​ ಮಾಡಲಾಗಿದೆ.

ವಾಟ್ಸಾಪ್​ ಗ್ರೂಪ್​​ಗೆ ಸೇರ್ಪಡೆಯಾಗಲು ಲಿಂಕ್​ನ್ನು ನೀಡಲಾಗಿತ್ತು. ಈ ಲಿಂಕ್​ನ ಮೂಲಕ 170ಕ್ಕೂ ಅಧಿಕ ಬಿಎ ವಿದ್ಯಾರ್ಥಿಗಳು ಈ ಗ್ರೂಪ್​​ಗೆ ಸೇರ್ಪಡೆಯಾಗಿದ್ದರು. ಅಶ್ಲೀಲ ಸಂದೇಶಗಳು ಗ್ರೂಪ್​ಗೆ ಬರುತ್ತಿದ್ದಂತೆಯೇ ಅನೇಕ ವಿದ್ಯಾರ್ಥಿಗಳು ಗ್ರೂಪ್​ನಿಂದ ಲೆಫ್ಟ್​ ಆಗಿ ಬಳಿಕ ಸೇರ್ಪಡೆಗೊಂಡಿದ್ದಾರೆ.
ವಿದ್ಯಾರ್ಥಿಗಳು ನೀಡಿರುವ ಮಾಹಿತಿಯ ಪ್ರಕಾರ ಇದೇ ಕಾಲೇಜಿನ ವಿದ್ಯಾರ್ಥಿಯೊಬ್ಬನ ಮೊಬೈಲ್​ ಸಂಖ್ಯೆಯಿಂದ ಈ ಅಶ್ಲೀಲ ಮೆಸೇಜ್​ಗಳು ಗ್ರೂಪ್​ಗೆ ಬಂದಿದೆ ಎನ್ನಲಾಗಿದೆ.

ಶನಿವಾರ ರಾತ್ರಿ 11:58ರ ಸುಮಾರಿಗೆ ಮೊದಲ ಬಾರಿಗೆ ನಮ್ಮದೇ ಕಾಲೇಜಿನ ವಿದ್ಯಾರ್ಥಿಯ ಮೊಬೈಲ್​ ನಂಬರ್​ನಿಂದ ಅಶ್ಲೀಲ ಫೋಟೋ ಗ್ರೂಪ್​ಗೆ ಬಂದಿತ್ತು. ಈ ಅಶ್ಲೀಲ ಫೋಟೋಗಳ ಮೂಲಕ ನಾಲ್ಕು ವಿದ್ಯಾರ್ಥಿನಿಯರನ್ನ ಗುರಿಯಾಗಿಸಲಾಗಿತ್ತು ಎಂದು ಮಹಿಳಾ ವಿದ್ಯಾರ್ಥಿನಿ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...