ಒಂದು ಬಾಳೆಹಣ್ಣಿನ ಸಿಪ್ಪೆ ಸುಲಿದು ಗುಳುಂ ಎಂದು ತಿನ್ನಲು ನಿಮಗೆ ಎಷ್ಟು ಸಮಯ ಬೇಕು ಹೇಳಿ? 10 ಸೆಕೆಂಡ್, 20 ಸೆಕೆಂಡ್‍ಗಳು…ತಾಳಿರಿ, ಕೈಗಳನ್ನು ಬಳಸದೆಯೇ ತಿನ್ನಿರಿ !
ಹೌದು, ಕೈಗಳನ್ನು ಬಳಸದೆಯೇ ಪ್ರಾಣಿಗಳಂತೆ ತಿನ್ನಬೇಕು. ಈ ಥರ ಒಂದು ದೊಡ್ಡ ಪಚ್ಚೆಬಾಳೆ ಹಣ್ಣನ್ನು ಭೂಪನೊಬ್ಬ ಹಲ್ಲುಗಳಿಂದ ಸಿಪ್ಪೆ ಸುಲಿದು ಗುಳುಂ ಮಾಡಿದ್ದಾನೆ. ಅದು ಕೂಡ ಕೇವಲ 37 ಸೆಕೆಂಡ್‍ಗಳಲ್ಲಿ ಮಾತ್ರ.
ಪುತ್ರನ ಬ್ಲೂಫಿಲ್ಮ್ ಸಿಡಿ, ಬುಕ್ ಹೊರಗೆಸೆದ ಪೋಷಕರಿಗೇ ಬಿಗ್ ಶಾಕ್: ದಂಡ ವಿಧಿಸಿದ ಕೋರ್ಟ್
ಈತನ ಹೆಸರು ಮೈಕ್ ಜ್ಯಾಕ್ ಅಂತ. ಯೂಟ್ಯೂಬ್ ಚಾನೆಲ್ ‘ಮೈಕ್ ಜ್ಯಾಕ್ ಈಟ್ಸ್ ಹೀಲ್’ನ ಮಾಲೀಕ.
ಈತನ ಈ ಭಕ್ಷಣೆ ಗಿನ್ನೆಸ್ ವಿಶ್ವದಾಖಲೆ ಕೂಡ ಆಗಿದೆ. ಇತ್ತೀಚೆಗೆ ಈತ ಒಂದು ದೊಡ್ಡ ಬಾಲಿಯಲ್ಲಿ ಟೊಮ್ಯಾಟೊ ಸಾಸ್ ಅನ್ನು 1 ನಿಮಿಷದ 32 ಸೆಕೆಂಡ್‍ಗಳಲ್ಲಿ ಕುಡಿದು ಮುಗಿಸಿ, ಗಿನ್ನೆಸ್ ದಾಖಲೆ ನಿರ್ಮಿಸಿದ್ದ.
https://www.youtube.com/watch?v=ju99ITN7pTE&feature=youtu.be