ಸರಕಾರದಿಂದ ಗುತ್ತಿಗೆ ಪಡೆಯಲಾಗಿರುವ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕೃಷಿಕ ಪ್ರಕಾಶ್ ಮಜುಂದಾರ್ ಕೈಗೆ 6.47 ಕ್ಯಾರಟ್ ವಜ್ರ ಸಿಕ್ಕಿದೆ..!
ಹೌದು, ಅದು ಕೂಡ 2 ವರ್ಷಗಳಲ್ಲಿ ಎರಡನೇ ಬಾರಿಗೆ ಇಂಥ ಬೃಹತ್ ಗಾತ್ರದ ವಜ್ರವು ಪ್ರಕಾಶ್ಗೆ ಸಿಕ್ಕಿದೆ.
‘ಅಕ್ಕಿನೇನಿ’ ಕೈಬಿಟ್ಟ ನಂತರ ವಿಚ್ಛೇದನ ವದಂತಿ ನಡುವೆ ‘ನಾಗ ಮಾವ’ನಿಗೆ ಶುಭ ಹಾರೈಸಿದ ಸಮಂತಾ
ಮಧ್ಯಪ್ರದೇಶದ ಪನ್ನಾ ಬಳಿಯ ಜರುವಾಪುರದಲ್ಲಿರುವ ಗಣಿಯಲ್ಲಿ 30 ಲಕ್ಷ ರೂ. ಬೆಲೆಬಾಳುವ ವಜ್ರವು ಪ್ರಕಾಶ್ಗೆ ಸಿಕ್ಕಿದೆ. ಕಳೆದ ವರ್ಷ ಕೂಡ 7.44 ಕ್ಯಾರಟ್ ತೂಕದ ವಜ್ರವು ಪ್ರಕಾಶ್ಗೆ ಸಿಕ್ಕಿತ್ತು. ಆ ಬಳಿಕ 2-2.5 ಕ್ಯಾರಟ್ ತೂಕದ ವಜ್ರಗಳು ಮಾತ್ರವೇ ಆತನಿಗೆ ಲಭಿಸುತ್ತಿದ್ದವು.
ಪನ್ನಾ ಜಿಲ್ಲೆಯಲ್ಲಿ ಸರಕಾರದ ಸಮೀಕ್ಷೆ ಪ್ರಕಾರ 12 ಲಕ್ಷ ಕ್ಯಾರಟ್ ವಜ್ರದ ರಾಶಿ ಭೂಮಿಯೊಳಗೆ ಇದೆ. ಸ್ಥಳೀಯ ರೈತರಿಗೆ ಅನುಕೂಲಕ್ಕಾಗಿ ಸಣ್ಣ ಪ್ರದೇಶಗಳನ್ನು ಗಣಿಗಾರಿಕೆಗೆ ಗುತ್ತಿಗೆ ಆಧಾರದ ಮೇಲೆ ಸರಕಾರ ನೀಡುತ್ತಿದೆ. ಸಿಕ್ಕ ವಜ್ರವನ್ನು ಅವರು ಜಿಲ್ಲಾ ಗಣಿಗಾರಿಗೆ ಅಧಿಕಾರಿಗೆ ಒಪ್ಪಿಸಿ, ನಿಗದಿತ ಹಣ ಪಡೆಯುತ್ತಾರೆ.