ಚಂಡೀಗಢ: ಹರಿಯಾಣ ಸಿಎಂ ಮನೋಹರಲಾಲ್ ಖಟ್ಟರ್ ಮತ್ತು ಬಿಜೆಪಿ ಮುಖಂಡರ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರನ್ನು ಹತ್ತಿಕ್ಕಲು ಮುಂದಾದ ಕರ್ನಾಲ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಯು ಪೊಲೀಸರಿಗೆ ‘ಹಿಂಸೆಗೆ’ ಆದೇಶಿಸುತ್ತಿರುವ ವಿಡಿಯೊ ವೈರಲ್ ಆಗಿದೆ.
ಪೊಲೀಸರಿಗೆ ಲಾಠಿಚಾರ್ಜ್ ಮಾಡಲು ಆದೇಶಿಸುತ್ತಿರುವ ಕರ್ನಾಲ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ. “ಯಾರು ಬೇಕಾದರೂ ಆಗಲಿ, ಎಲ್ಲಿಂದಲೇ ಬಂದಿರಲಿ. ಅವರಿಗೆ ಸಚಿವರನ್ನು ಮುಟ್ಟಲು ಬಿಡಬೇಡಿ. ಲಾಠಿ ಎತ್ತಿಕೊಳ್ಳಿ, ಜೋರಾಗಿಯೇ ಬಾರಿಸಿ. ಒಬ್ಬನೇ ಒಬ್ಬ ಪ್ರತಿಭಟನಾಕಾರ ಸಿಕ್ಕಿಬಿದ್ದಲ್ಲಿ, ಆತನ ತಲೆ ಒಡೆಯುವುದನ್ನು ನಾನು ಕಾಣಬೇಕು” ಎಂದು ಆದೇಶ ನೀಡುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
‘ಅಕ್ಕಿನೇನಿ’ ಕೈಬಿಟ್ಟ ನಂತರ ವಿಚ್ಛೇದನ ವದಂತಿ ನಡುವೆ ‘ನಾಗ ಮಾವ’ನಿಗೆ ಶುಭ ಹಾರೈಸಿದ ಸಮಂತಾ
ರಸ್ತೆ ತಡೆ ನಡೆಸಿದ್ದ ರೈತರಿಂದಾಗಿ, ದೆಹಲಿ ಮತ್ತು ಚಂಡೀಗಢದ ನಡುವಿನ ಹೆದ್ದಾರಿಯಲ್ಲಿ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಆಗಿತ್ತು. ಲಾಠಿಚಾರ್ಜ್ ಮಾಡಿದ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಕಲ್ಲೆಸದ ಪ್ರಕರಣ ಕೂಡ ನಡೆದಿದೆ.
ವಿಡಿಯೊ ವಿರುದ್ಧ ಬಿಜೆಪಿ ಸಂಸದ ವರುಣ್ ಗಾಂಧಿ ಅವರೇ ಟ್ವಿಟರ್‍ನಲ್ಲಿ ಕಿಡಿಕಾರಿದ್ದಾರೆ. ಇಂಥ ಹೇಳಿಕೆಗಳು ಪ್ರಜಾಪ್ರಭುತ್ವ ವಿರೋಧಿ ಎಂದು ಅಸಮಾಧಾನ ಹೊರಹಾಕಿದ್ದಾರೆ.